ಶನಿವಾರ, ಸೆಪ್ಟೆಂಬರ್ 18, 2021
28 °C

ಮಂಗಳೂರು ಮಡಗಾವ್ ಮಧ್ಯೆ ನಿತ್ಯ ರೈಲು ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಮಂಗಳೂರು ಸೆಂಟ್ರಲ್ ಹಾಗೂ ಮಡಗಾವ್ ಜಂಕ್ಷನ್‌ ಮಧ್ಯೆ ಆ.16ರಿಂದ 06602–06601 ಸಂಖ್ಯೆಯ ರೈಲು ಸಂಚರಿಸಲಿದೆ ಎಂದು ಕೊಂಕಣ್ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

06602 ಮಂಗಳೂರು ಸೆಂಟ್ರಲ್‌-ಮಡಗಾವ್ ಜಂಕ್ಷನ್ ಮಧ್ಯೆ ಪ್ರತಿನಿತ್ಯ ಸಂಚರಿಸುವ (ಮುಂಗಡ ಬುಕ್ಕಿಂಗ್) ರೈಲು ಆ.16ರಿಂದ ಬೆಳಿಗ್ಗೆ 5.30ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಟು ಅದೇದಿನ ಮಧ್ಯಾಹ್ನ 2ಕ್ಕೆ ಮಡಗಾವ್ ತಲುಪಲಿದೆ.

06601 ಮಡಗಾವ್ ಜಂಕ್ಷನ್‌–ಮಂಗಳೂರು ಸೆಂಟ್ರಲ್ ರೈಲು ಆ.16ರಿಂದ ಮಧ್ಯಾಹ್ನ 2.30ಕ್ಕೆ ಮಡಗಾವ್‌ ಜಂಕ್ಷನ್‌ನಿಂದ ಹೊರಟು ರಾತ್ರಿ 9.40ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

ಈ ರೈಲುಗಳು ಮಂಗಳೂರು ಜಂಕ್ಷನ್‌, ತೋಕೂರು, ಸುರತ್ಕಲ್‌, ಮುಲ್ಕಿ, ನಂದಿಕೂರು, ಪಡುಬಿದ್ರಿ, ಇನ್ನಂಜೆ, ಉಡುಪಿ, ಬಾರ್ಕೂರು, ಕುಂದಾಪುರ, ಸೇನಾಪುರ, ಬಿಜೂರು, ಮೂಕಾಂಬಿಕ ರಸ್ತೆ ಬೈಂದೂರು, ಶಿರೂರು, ಭಟ್ಕಳ, ಚಿತ್ರಾಪುರ, ಮುರುಡೇಶ್ವರ, ಮಂಕಿ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್‌, ಅಂಕೋಲ, ಹರ್ವಾಡ, ಕಾರವಾರ, ಅಸ್ನೋಟಿ ಮಾರ್ಗವಾಗಿ ಸಂಚರಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.