ಬುಧವಾರ, ಜೂನ್ 23, 2021
30 °C

ಕಾಪು: ಇಬ್ಬರು ಪ್ರವಾಸಿಗರು ಸಮುದ್ರಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಪು (ಉಡುಪಿ): ಕಾಪು ಬೀಚ್‌ನಲ್ಲಿ ಭಾನುವಾರ ಈಜಾಡಲು ಇಳಿದಿದ್ದ ಇಬ್ಬರು ಪ್ರವಾಸಿಗರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನೆಲಮಂಗಲ ತಾಲ್ಲೂಕಿನ ಹೆಸರಕಟ್ಟೆಯ ರೂಪೇಶ್‌ (21), ಕಾರ್ತಿಕ್ (21) ಮೃತರು.

ರೂಪೇಶ್, ಕಾರ್ತಿಕ್‌, ದಿಲೀಪ್, ಜಯಂತ್, ಲಿಖಿತ್ ಭಾನುವಾರ ಪ್ರವಾಸಕ್ಕೆ ಬಂದಿದ್ದರು. ಮೊದಲು ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಪಡೆದು, ಅಲ್ಲಿಂದ ಕಾಪು ಬೀಚ್‌ಗೆ ಬಂದಿದ್ದರು.

ಸಮುದ್ರಕ್ಕೆ ಇಳಿಯದಂತೆ ಬೀಚ್‌ನ ಲೈಫ್‌ ಗಾರ್ಡ್‌ ಸಿಬ್ಬಂದಿ ಎಚ್ಚರಿಕೆ ನೀಡಿದ್ದರೂ, ಯುವಕರು ಕಡೆಗಣಿಸಿ ಈಜಲು ತೆರಳಿದ್ದರು. ದಿಲೀಪ್, ಜಯಂತ್, ಲಿಖಿತ್ ಈಜಿ ದಡ ಸೇರಿದರೆ, ಕಾರ್ತಿಕ್ ಹಾಗೂ ರೂಪೇಶ್ ಸಮುದ್ರದಲ್ಲಿ ಮುಳುಗಿದರು. ರೂಪೇಶ್‌ನನ್ನು ದಡಕ್ಕೆ ಎಳೆದು ತರಲಾಯಿತಾದರೂ, ಅಷ್ಟರಲ್ಲಿ ಮೃತಪಟ್ಟಿದ್ದರು ಎಂದು ಬೀಚ್‌ನಲ್ಲಿದ್ದ ಸಿಬ್ಬಂದಿ ಮಾಹಿತಿ ನೀಡಿದರು.

ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು