ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಡುಬಿದ್ರಿ: ಅ. 3ರಿಂದ ಉಚ್ಚಿಲ ದಸರಾ ವೈಭವ, ಆಮಂತ್ರಣ ಪತ್ರಿಕೆ ಬಿಡುಗಡೆ

Published 28 ಆಗಸ್ಟ್ 2024, 6:26 IST
Last Updated 28 ಆಗಸ್ಟ್ 2024, 6:26 IST
ಅಕ್ಷರ ಗಾತ್ರ

ಪಡುಬಿದ್ರಿ: ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನದ ಪ್ರಾಂಗಣದಲ್ಲಿ ಉಚ್ಚಿಲ ದಸರಾ-24 ಆಮಂತ್ರಣ ಪತ್ರಿಕೆ ಮಂಗಳವಾರ ಬಿಡುಗಡೆ ಮಾಡಲಾಯಿತು.

ಮೊಗವೀರ ಸಮಾಜದ ನಾಯಕ ಜಿ. ಶಂಕರ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ‘ಅ. 3ರಿಂದ 12ರವರೆಗೆ ನಡೆಯುವ ಉಚ್ಚಿಲ ದಸರಾವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲಾಗುವುದು. ನೃತ್ಯ ವೈವಿಧ್ಯ, ದೇಹದಾಢ್ಯ ಸ್ಪರ್ಧೆ, ಹೆಣ್ಣು ಮಕ್ಕಳ ಹುಲಿ ಕುಣಿತ ಸ್ಪರ್ಧೆ, ಸಾಮೂಹಿಕ ದಾಂಡಿಯ ನೃತ್ಯ ಇತ್ಯಾದಿ ವಿಶೇಷಗಳು ಇರಲಿವೆ’ ಎಂದರು.

ದೇವಸ್ಥಾನದ ಪ್ರಧಾನ ಅರ್ಚಕ ಕೆ.ವಿ. ರಾಘವೇಂದ್ರ ಉಪಾಧ್ಯಾಯ ಆಮಂತ್ರಣ ಪತ್ರಿಕೆಗೆ ಪೂಜೆ ಸಲ್ಲಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಜೊತೆ ಕಾರ್ಯದರ್ಶಿ ಸುಜಿತ್ ಸಾಲ್ಯಾನ್ ಮುಲ್ಕಿ, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ಪ್ರುಮುಖರಾದ ನಾರಾಯಣ ಸಿ ಕರ್ಕೇರ, ಸುಧಾಕರ್ ಕುಂದರ್, ಮೋಹನ್ ಬಂಗೇರ ಕಾಪು, ದಿನೇಶ್ ಎರ್ಮಾಳು, ಆನಂದ ಸಿ ಕುಂದರ್, ಉಷಾರಾಣಿ ಬೋಳೂರು, ಉಷಾ ಲೋಕೇಶ್, ಮನೋಜ್ ಪಿ ಕಾಂಚನ್, ಸುಗುಣ ಎಸ್ ಕರ್ಕೇರ, ವಾಸುದೇವ ಸಾಲ್ಯಾನ್ ಕಟಪಾಡಿ, ಗುಂಡು.ಬಿ ಅಮೀನ್ ಕಿದಿಯೂರು, ಸತೀಶ್ ಎಸ್ ಅಮೀನ್ ಬೆಣ್ಣೆ ಕುದ್ರು, ಮಂಜುನಾಥ್ ಸುವರ್ಣ ಬ್ರಹ್ಮಾವರ, ರವೀಂದ್ರ ಶ್ರೀಯಾನ್ ಹಿರಿಯಡ್ಕ, ಶಿವರಾಮ ಕೋಟ, ಲೋಕೇಶ್ ಮೆಂಡನ್ ಉಪ್ಪೂರು, ವಿನಯ ಕರ್ಕೆರ ಮಲ್ಪೆ, ಕೇಶವ ಎಂ ಕೋಟ್ಯಾನ್ ಮಲ್ಪೆ, ಗಿರೀಶ್ ಕುಮಾರ್ ಪಿತ್ರೋಡಿ, ಜಯಂತ್ ಸಾಲ್ಯಾನ್ ಕನಕೋಡ, ಕಿರಣ್ ಕುಮಾರ್ ಪಿತ್ರೋಡಿ, ಸುಧಾಕರ ವಿ ಸುವರ್ಣ ಉಚ್ಚಿಲ, ನಾರಾಯಣ ಸಿ ಕರ್ಕೇರ ಪಡುಬಿದ್ರಿ ಕಾಡಿಪಟ್ಣ, ಸತೀಶ್ ಆರ್ ಕರ್ಕೇರ ಸುರತ್ಕಲ್, ವಿಜಯ ಸುವರ್ಣ ಕುಳಾಯಿ, ಹೇಮಂತ್ ತಿಂಗಳಾಯ ಹೊಯ್ಗೆ ಬಜಾರ್, ಪುರುಷೋತ್ತಮ ಕೋಟ್ಯಾನ್ ಬೋಳೂರು, ಯಶವಂತ್ ಪಿ ಮೆಂಡನ್, ಬೋಳೂರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT