ಕೋಟ(ಬ್ರಹ್ಮಾವರ): ‘ಲೋಕಕ್ಕೆ ಕ್ಷೇಮ ದೊರೆಯಬೇಕಾದರೆ ಕಾವಲುಗಾರನಂತೆ ಹಗಲಿರುಳು ಕಾರ್ಯನಿರ್ವಹಿಸಬೇಕು. ಆಗ ನಾವು ನೆಮ್ಮದಿ, ಸಮೃದ್ಧಿಯಿಂದಿರಲು ಸಾಧ್ಯ’ ಎಂದು ಉಡುಪಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.
ಕೋಟದ ಹರ್ತಟ್ಟು ಕಲ್ಲಟ್ಟು ಮಹಾಲಿಂಗೇಶ್ವರ ದೇವಸ್ಥಾನದ ನೂತನ ಸುತ್ತುಪೌಳಿ ಲೋಕಾರ್ಪಣೆ, ಅಷ್ಟಬಂಧ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ದೇವಸ್ಥಾನದ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್ ಕಾರ್ಯಕ್ರಮ ಉದ್ಘಾಟಿ ಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಗಾಣಿಗ ಅಧ್ಯಕ್ಷತೆ ವಹಿಸಿದ್ದರು.
ಜೀರ್ಣೋದ್ಧಾರಕ್ಕೆ ಸಹಕಾರ ನೀಡಿದ ದಾನಿಗಳಾದ ವಾಸುದೇವ ಮಯ್ಯ ಹರ್ತಟ್ಟು, ವಾಸುದೇವ ಮಯ್ಯ ಕಾಸನಗುಂದು, ಶ್ರೀನಿವಾಸ ಮಯ್ಯ ಹರ್ತಟ್ಟು, ಶ್ರೀನಿವಾಸ ಪೂಜಾರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಶೆಟ್ಟಿ, ಇಂಜಿನಿಯರ್ ಮಿಥಿಲೇಶ್ ಆಚಾರ್ಯ, ಪೈಂಟರ್ ಸುರೇಶ್ ಸೇರಿಗಾರ್ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಿತ್ ದೇವಾಡಿಗ, ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಸತೀಶ್ ಎಚ್. ಕುಂದರ್, ಕೋಟ ವಿರಾಡ್ವಿಶ್ಚ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಎಂ. ಸುಬ್ರಾಯ ಆಚಾರ್ಯ, ಗುತ್ತಿಗೆದಾರ ಹೋಬಳಿಮನೆ ರಾಜು ಪೂಜಾರಿ, ಗ್ರಾ.ಪಂ. ಸದಸ್ಯರಾದ ಸುಧಾ ಎ. ಪೂಜಾರಿ, ಪಾಂಡು ಪೂಜಾರಿ, ಮಹಾಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ಶೇಖರ್ ದೇವಾಡಿಗ, ಜಿ. ಮಂಜುನಾಥ ಸೋಮಯಾಜಿ, ಕಲ್ಮಾಡಿ ಕೃಷ್ಣಮೂರ್ತಿ ಐತಾಳ್, ಹಂಡಿಕೆರೆಮೆನೆ ಸಂತೋಷ್ ಕುಮಾರ್ ಶೆಟ್ಟಿ, ಶನೀಶ್ವರ ದೇವಳದ ಧರ್ಮದರ್ಶಿ ಭಾಸ್ಕರ ಸ್ವಾಮಿ ಇದ್ದರು.
ಶಿಕ್ಷಕ ಸತೀಶ್ಚಂದ್ರ ಶೆಟ್ಟಿ, ದೀಪಿಕಾ ನಿರೂಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.