ಕುಂದಾಪುರ: ಕುಂದಾಪುರ: ತಾಲ್ಲೂಕಿನ ಗೋಪಾಡಿಯ ಚರ್ಕಿಕಡು ಎಂಬಲ್ಲಿ ಸಮುದ್ರಕ್ಕಿಳಿದ್ದ ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಅಲೆಗಳ ಸೆಳೆತಕ್ಕೆ ಸಿಕ್ಕಿ ಭಾನುವಾರ ಮೃತಪಟ್ಟಿದ್ದಾರೆ. ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಗೌತಮ್ (19), ಲೋಕೇಶ್ (19), ಆಶಿಶ್ (18) ಮೃತರು. ಇಬ್ಬರು ವಿದ್ಯಾರ್ಥಿಗಳನ್ನು ಸ್ಥಳೀಯ ಮೀನುಗಾರ ಉಮೇಶ್ ರಕ್ಷಿಸಿದ್ದು, ಒಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಶ್ವರ ಮಲ್ಪೆ ಅವರ ತಂಡ ಮೂವರ ಮೃತದೇಹಗಳನ್ನು ಸಮುದ್ರದಿಂದ ಮೇಲಕ್ಕೆತ್ತಿದೆ.

ಬೆಂಗಳೂರಿನ ಪಿ.ಎಸ್. ಹಾಗೂ ಇತರ ಕಾಲೇಜಿನ ಒಟ್ಟು 10 ವಿದ್ಯಾರ್ಥಿಗಳು ರೈಲಿನ ಮೂಲಕ ಶುಕ್ರವಾರ ಉಡುಪಿಗೆ ಬಂದಿದ್ದರು. ತಂಡದಲ್ಲಿ ಗುಜರಾತ್, ನೇಪಾಳ ಮೂಲದ ವಿದ್ಯಾರ್ಥಿಗಳು ಸಹ ಇದ್ದರು ಎಂದು ತಿಳಿದುಬಂದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.