ಉಡುಪಿ: ಕರಾವಳಿ ಜಿಲ್ಲೆಯಾದ ಉಡುಪಿಯಲ್ಲಿ ರಸ್ತೆ, ಚರಂಡಿ ಸಮಸ್ಯೆಗಳು ಅಧಿಕವಾಗಿದ್ದು, ಇಂತಹ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ಸೂಕ್ತ ಯೋಜನೆ ಘೋಷಿಸಿ ಕಾರ್ಯರೂಪಕ್ಕೆ ತರಬೇಕೆಂಬ ಬೇಡಿಕೆ ಜನರಿಂದ ಕೇಳಿಬಂದಿದೆ.

ನಗರಸಭೆ ಸೇರಿದಂತೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸರ್ಕಾರವು ಹೆಚ್ಚಿನ ಅನುದಾನವನ್ನು ಘೋಷಿಸುವ ಮೂಲಕ ಮೂಲ ಸೌಕರ್ಯಕ್ಕೆ ಒತ್ತು ನೀಡಬೇಂಬುದು ಜನರ ಆಗ್ರಹವಾಗಿದೆ.

ಸಾಕಷ್ಟು ಅನುದಾನ ಇಲ್ಲದೆ ರಸ್ತೆಗಳ ದುರಸ್ತಿ ಕಾರ್ಯ ನಡೆದಿಲ್ಲ ಎಂದು ಜನಪ್ರತಿನಿಧಿಗಳು ಪದೇ ಪದೇ ಕಾರಣ ಹೇಳುತ್ತಿದ್ದು, ಉಡುಪಿ ನಗರ ಹಾಗೂ ಗ್ರಾಮೀಣ ಪ್ರದೇಶದ ಹಲವು ರಸ್ತೆಗಳು ಇನ್ನೂ ಹೊಂಡಮಯವಾಗಿಯೇ ಉಳಿದುಕೊಂಡು ಸಂಕಷ್ಟ ಅನುಭವಿಸುವಂತಾಗಿದೆ ಎನ್ನುವುದು ಜನರ ಆರೋಪವಾಗಿದೆ.

ಉಡುಪಿ ನಗರಸಭೆಯನ್ನು ಮಹಾನಗರವಾಗಿ ಮೇಲ್ದರ್ಜೆಗೇರಿಸುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಕಳೆದ ವರ್ಷ ಸರ್ಕಾರವು ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಬಳಿಕ ಅದರ ಸಾಧಕ ಬಾಧಕಗಳ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆದಿದ್ದವು.

ಉಡುಪಿ ನಗರವು ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಿದ್ದು ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದರೆ ಇನ್ನಷ್ಟು ಅನುದಾನ ಬಂದು ನಗರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂಬುದಾಗಿಯೂ ನಗರವಾಸಿಗಳು ಅಭಿಪ್ರಾಯಪಟ್ಟಿದ್ದರು.

ನಗರಸಭೆ ಸಮೀಪವಿರುವ ಕೆಲವು ಗ್ರಾಮ ಪಂಚಾಯಿತಿಗಳನ್ನು ಸೇರ್ಪಡೆಗೊಳಿಸಿದರೆ ಮಹಾನಗರ ಪಾಲಿಕೆಗೆ ಅಗತ್ಯವಿರುವ ಜನಸಂಖ್ಯೆಯೂ ಸಿಗಲಿದೆ ಮತ್ತು ಜನಸಾಂದ್ರತೆಯೂ ಮಾನದಂಡಕ್ಕೆ ಅನುಗುಣವಾಗಿ ಆಗಲಿದೆ ಎಂಬುದರ ಬಗ್ಗೆಯೂ ಚರ್ಚೆಗಳು ನಡೆದಿದ್ದವು.

ಈ ಎಲ್ಲಾ ವಿಚಾರಗಳನ್ನಿಟ್ಟುಕೊಂಡು ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ ಸದ್ಯಕ್ಕೆ ಉಡುಪಿ ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರುವ ಯಾವುದೇ ಲಕ್ಷಣಗಳು ಗೋಚರವಾಗುತ್ತಿಲ್ಲ.

ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದು ಉಡುಪಿ ನಗರದಲ್ಲಿ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಅಪಾರ್ಟ್ಮೆಂಟ್ , ಹೋಟೆಲ್ ಮೊದಲಾದವರು ಮಳೆ ನೀರು ಹರಿಯುವ ತೋಡಿಗೆ ಕೊಳಚೆ ನೀರನ್ನು ಬಿಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಮಳೆ ನೀರು ಹರಿಯುತ್ತಿರುವ ತೋಡಿನಲ್ಲಿ ಚರಂಡಿ ನೀರು ಹರಿಯುತ್ತಿರುವುದರಿಂದ ನಗರ ವ್ಯಾಪ್ತಿಯ ಬಾವಿಗಳೂ ಕಲುಷಿತವಾಗಿವೆ ಎನ್ನುತ್ತಾರೆ ಜನರು.

ನಗರದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಗಾಗಿ ಸರ್ಕಾರವು ಬಜೆಟ್ನಲ್ಲಿ ಸಾಕಷ್ಟು ಅನುದಾನವನ್ನು ಮೀಸಲಿರಿಸಿ, ಅದನ್ನು ಕಾರ್ಯರೂಪಕ್ಕೆ ತರಬೇಕೆಂಬ ಒತ್ತಾಯವು ಜನರಿಂದ ಕೇಳಿಬಂದಿವೆ.

ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಜನರ ಸುರಕ್ಷಿತ ಸಂಚಾರಕ್ಕೆ ಯೋಗ್ಯವಾಗುವ ರೀತಿಯಲ್ಲಿ ರಸ್ತೆಗಳ ದುರಸ್ತಿಗಾಗಿ ಸಾಕಷ್ಟು ಅನುದಾನ ಮೀಸಲಿರಿಸಬೇಕು. ಈ ವರ್ಷದ ಮಳೆಗಾಲದಲ್ಲಿ ನಿರಂತರ ಮಳೆ ಸುರಿದ ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಲವು ರಸ್ತೆಗಳು ಹದಗೆಟ್ಟಿವೆ ಎಂದೂ ಸಾರ್ವಜನಿಕರು ಹೇಳುತ್ತಾರೆ.

ಮೂಲಸೌಕರ್ಯ ವೃದ್ಧಿಯಾದರೆ ಅಭಿವೃದ್ಧಿ’

‘ಈ ವರ್ಷದ ಬಜೆಟ್ನಲ್ಲಿ ಬಹು ನಿರೀಕ್ಷೆ ಮಾಡುತ್ತಿರುವುದು ಮೂಲಸೌಕರ್ಯಗಳ ಅಭಿವೃದ್ಧಿಯ ಬೇಡಿಕೆ. ಯಾವುದೇ ಪ್ರದೇಶ ಶೀಘ್ರವಾಗಿ ಅಭಿವೃದ್ಧಿ ಹೊಂದಬೇಕಾದರೆ ರಸ್ತೆ ಚರಂಡಿ ಕುಡಿಯುವ ನೀರಿನ ವ್ಯವಸ್ಥೆ ಶಾಲಾ ಪರಿಸರ ಪರಿಕರಗಳು ಸಮರ್ಪಕವಾಗಿದ್ದಾಗ ಮಾತ್ರ ಅಲ್ಲಿ ಶಿಕ್ಷಣ ಆರೇೂಗ್ಯ ಪ್ರವಾಸೋದ್ಯಮ ಇನ್ನಿತರ ಉದ್ಯಮಗಳು ಹುಟ್ಟಿ ಬರಲು ಸಾಧ್ಯ. ಆದರೆ ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶ ನಗರ ಪ್ರದೇಶಗಳಲ್ಲಿ ಎಲ್ಲಾ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿಯೇ ನಮ್ಮ ಅಭಿವೃದ್ಧಿ ಕುಂಠಿತಗೊಂಡಿದೆ ಎನ್ನುವುದು ಜನರ ಕೂಗು’ ಎನ್ನುತ್ತಾರೆ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ. ‘ಸ್ಥಳೀಯಾಡಳಿತ ಸಂಸ್ಥೆಗಳಿಗೆ ಯಾವುದೇ ರೀತಿಯಲ್ಲಿ ಹೆಚ್ಚಿನ ಅನುದಾನ ಬರುತ್ತಿಲ್ಲ ಅನ್ನುವುದು ಗ್ರಾಮಾಡಳಿತ ನಗರ ಆಡಳಿತ ಸಂಸ್ಥೆಗಳ ಅಪಸ್ವರ. ಸಣ್ಣಪುಟ್ಟ ಕೆಲಸಗಳಿಗೂ ಅಗತ್ಯವಾದ ಅನುದಾನ ಕಳೆದ 2 ವರ್ಷಗಳಿಂದ ಹರಿದು ಬಾರದೆ ಇರುವುದರಿಂದ ರಸ್ತೆ ಚರಂಡಿ ಕಾಲು ಸೇತುವೆ ಮೊದಲಾದವುಗಳಿಗೆ ತೇಪೆ ಹಾಕುವ ಕೆಲಸವಷ್ಟೇ ನಡೆಯುತ್ತಿರುವುದು ವಿಷಾದನೀಯ. ಈ ಬಾರಿಯ ಬಜೆಟ್ನಲ್ಲಿ ಇಂತಹ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಕ್ಲಪ್ತ ಕಾಲಕ್ಕೆ ಸರ್ಕಾರ ನೀಡುವಲ್ಲಿ ಮುಂದಾಗಬೇಕು’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.