ಬ್ರಹ್ಮಾವರ: ‘ತುಂಡು ಭೂಮಿ ಹಿಡುವಳಿದಾರರು ಹೆಚ್ಚಿರುವ ನಮ್ಮ ಜಿಲ್ಲೆಯಲ್ಲಿ ಮಾಹಿತಿ ಕೊರತೆಯಿಂದ ಕೃಷಿ ನಷ್ಟದಾಯಕವಾಗುತ್ತಿದೆ. ಅಲ್ಲದೆ ಕೃಷಿಯಲ್ಲಿ ತೊಡಗುವಂತೆ ಸರ್ಕಾರ ಯುವಜನರಿಗೆ ಯಾವ ಯೋಜನೆಗಳನ್ನೂ ರೂಪಿಸದಿರುವುದರಿಂದ ಇಂದು ಕೃಷಿಯಿಂದ ವಿಮುಖರಾಗುವವರು ಹೆಚ್ಚಾಗಿ ಜಮೀನು ಹಡೀಲು ಬೀಳುತ್ತಿದೆ’ ಎಂದು ನಿವೃತ್ತ ಶಿಕ್ಷಕ, ಆರೂರು ಗ್ರಾಮ ಪಂಚಾಯಿತಿ ಸದಸ್ಯ ರತ್ನಾಕರ ಶೆಟ್ಟಿ ಹೇಳಿದರು.

ಜಿಲ್ಲಾ ಕೃಷಿಕ ಸಂಘವು ಆರೂರು ಹೆಬ್ಬಾರಬೆಟ್ಟು ಆಶಾ ನಿಲಯದಲ್ಲಿ ಆಯೋಜಿಸಿದ್ದ ವೈಜ್ಞಾನಿಕ ತೆಂಗು ಮತ್ತು ಅಡಿಕೆ ಬೇಸಾಯ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಆರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುರಾಜ ರಾವ್ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಬೆರಂಬೈಲು ಉದಯ ಕುಮಾರ ಶೆಟ್ಟಿ ಚೇರ್ಕಾಡಿ ಉದ್ಘಾಟಿಸಿದರು.

ಶ್ರೀಧರ ಶೆಟ್ಟಿ ಮುಂಡ್ಕಿನಜೆಡ್ಡು, ಚೇರ್ಕಾಡಿ ಗ್ರಾಮ ಪಂಚಾಯಿತಿ ಸದಸ್ಯ ಹರೀಶ ಶೆಟ್ಟಿ, ಅರುಣ ಕುಮಾರ್ ಶೆಟ್ಟಿ ಕುರ್ಡುಂಜೆ, ಆನಂದ ಶೆಟ್ಟಿ ಕುದ್ಕುಂಜೆ, ರತ್ನಾಕರ ಶೆಟ್ಟಿ, ರಮೇಶ ಶೆಟ್ಟಿ, ಸುಂದರ ಶೆಟ್ಟಿ, ಸಂತೋಷ ಶೆಟ್ಟಿ, ರೇವತಿ ಶೆಟ್ಟಿ ಹೆಬ್ಬಾರಬೆಟ್ಟು, ಉಮೇಶ ಭಟ್, ಗಣೇಶ ನಾಯ್ಕ ಗೋರ್ಪಾಡಿ, ಮಮತಾ ಶೆಟ್ಟಿ ಆಲುಂಜೆ, ಸುಧೀರ ಶೆಟ್ಟಿ ಕುದ್ಕುಂಜೆ, ಕರುಣಾಕರ ಶೆಟ್ಟಿ ಹಾವಂಜೆ, ಅಮೃತ ಕುಮಾರ್ ಚೇರ್ಕಾಡಿ, ಮಡಿ ಸಂತೋಷ್ ಶೆಟ್ಟಿ ಭಾಗವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾದ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ವೈಜ್ಞಾನಿಕವಾಗಿ ಕಡಿಮೆ ಖರ್ಚು, ಕಡಿಮೆ ಶ್ರಮ, ಕಡಿಮೆ ನೀರು, ಗೊಬ್ಬರ ಬಳಕೆ ಮಾಡಿ ಲಾಭದಾಯಕ ತೆಂಗು, ಅಡಿಕೆ ಕೃಷಿ ಮಾಡುವ ಸುಲಭ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನಯನಾ, ಸುಚಿತ್ರಾ ಪ್ರಾರ್ಥಿಸಿದರು. ರತ್ನಾಕರ ಶೆಟ್ಟಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಆನಂದ ಶೆಟ್ಟಿ ಚಿತ್ತೂರು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.