ಶನಿವಾರ, ನವೆಂಬರ್ 28, 2020
18 °C

ಉಡುಪಿ ಸೀರೆ ಉಡುಗೊರೆ ನೀಡಿದ ಶೋಭಾ ಕರಂದ್ಲಾಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ದೀಪಾವಳಿಯ ಉಡುಗೊರೆಯಾಗಿ ಶೆಫಾಲಿ ವೈದ್ಯ, ಅಮ್ರಿತಾ ಬಿಂಡರ್‌ ಸೇರಿದಂತೆ ಹಲವು ಮಹಿಳೆಯರಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಉಡುಪಿ ಸೀರೆಗಳನ್ನು ನೀಡಿದ್ದಾರೆ.

ಸೀರೆಗಳನ್ನು ನೋಡಿ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿರುವ ಶೆಫಾಲಿ ವೈದ್ಯ ‘ಶೋಭಾ ಅವರಿಂದ ದೀಪಾವಳಿಗೆ ಅಚ್ಚರಿಯ ಉಡುಗೊರೆ ಸಿಕ್ಕಿದೆ. ಸ್ಥಳೀಯ ನೇಕಾರರ ಬೆಂಬಲ ನೀಡಲು ಉಡುಪಿ ಸೀರೆಯನ್ನು ನೀಡಿರುವುದು ಖುಷಿಯಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಯಾಗಿ, ಪ್ರತಿ ಶುಕ್ರವಾರ ಉಡುಪಿಯ ಕೃಷ್ಣನಿಗೂ ಉಡುಪಿ ಸೀರೆಯಿಂದ ಲಕ್ಷ್ಮಿಯ ಅಲಂಕಾರ ಮಾಡಲಾಗುತ್ತದೆ. ಅದಮಾರು ಶ್ರೀಗಳು ನೇಕಾರ ವೃತ್ತಿ ಉಳಿವಿಗೆ ಇಂತಹ ಸಂಪ್ರದಾಯ ಹುಟ್ಟುಹಾಕಿದ್ದು, ಎಲ್ಲರೂ ನೇಕಾರರ ಬೆಂಬಲಕ್ಕೆ ನಿಲ್ಲೋಣ’ ಎಂದು ಶೋಭಾ ಪ್ರತಿಕ್ರಿಯೆ ನೀಡಿದ್ದಾರೆ.

ಅಮ್ರಿತಾ ಬಿಂಡರ್ ಎಂಬುವರು ಕೂಡ ‘ಶೋಭಾ ಅವರಿಂದ ಸುಂದರವಾದ ಉಡುಪಿ ಸೀರೆ ಉಡುಗೊರೆಯಾಗಿ ಸಿಕ್ಕಿದೆ’ ಎಂದು ಸಂತಸ ಹಂಚಿಕೊಂಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು