ಉಡುಪಿ: ಮುಗಿಯದ ಕಾಮಗಾರಿಗಳು, ಅವೈಜ್ಞಾನಿಕ ರಸ್ತೆಗಳು, ವಾಹನಗಳ ಅತಿ ವೇಗದ ಚಾಲನೆಯಿಂದಾಗಿ ಜಿಲ್ಲೆಯ ಹಲವು ಹೆದ್ದಾರಿಗಳು ಮೃತ್ಯುಕೂಪವಾಗಿ ಪರಿಣಮಿಸುತ್ತಿದೆ. ಕಳೆದೊಂದು ತಿಂಗಳಲ್ಲೇ ಬ್ರಹ್ಮಾವರ ಸೇರಿದಂತೆ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ದ್ವಿಚಕ್ರ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ.

ಮಳೆಗಾಲ ಸನ್ನಿಹಿತವಾದರೂ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳು ದಡಮುಟ್ಟುವ ಯಾವುದೇ ಸೂಚನೆಗಳು ಕಂಡು ಬರುತ್ತಿಲ್ಲ. ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಂಡರ್ಪಾಸ್ ಕಾಮಗಾರಿ ಇನ್ನೂ ಮುಗಿದಿಲ್ಲ. ಇಲ್ಲಿ ಸರ್ವಿಸ್ ರಸ್ತೆಗಳಲ್ಲಿ ವಾಹನಗಳು ಸಂಚರಿಸುತ್ತಿದ್ದರೂ ಮಳೆಗಾಲ ಆರಂಭವಾದರೆ ಇಲ್ಲಿನ ಪರಿಸ್ಥಿತಿ ಬಿಗಡಾಯಿಸಲಿದೆ ಎನ್ನುತ್ತಾರೆ ವಾಹನ ಸವಾರರು.

ಇಂದ್ರಾಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿಯು ಶೀಘ್ರ ಮುಗಿಯುವ ಯಾವುದೇ ಲಕ್ಷಣಗಳು ಗೋಚರವಾಗುತ್ತಿಲ್ಲ. ಮುಂಬರುವ ಮಳೆಗಾಲದಲ್ಲೂ ಇಲ್ಲಿ ವಾಹನ ಸವಾರರು ಸಂಕಷ್ಟ ಅನುಭವಿಸಬೇಕಾದೀತು ಎನ್ನುತ್ತಾರೆ ಸ್ಥಳೀಯರು. ಅಂಬಲಪಾಡಿಯಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಹೆದ್ದಾರಿಯ ವಾಹನಗಳು ಸರ್ವಿಸ್ ರಸ್ತೆಗಳಲ್ಲೇ ಸಂಚರಿಸುತ್ತಿವೆ. ಈ ಸರ್ವಿಸ್ ರಸ್ತೆಗಳು ಅಲ್ಲಲ್ಲಿ ಕಿತ್ತು ಹೋಗಿದ್ದು, ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಆಹ್ವಾನಿಸುತ್ತಿವೆ.

ಮಳೆ ಅರಂಭವಾಗುವುದಕ್ಕೆ ಮೊದಲು ಈ ಸರ್ವಿಸ್ ರಸ್ತೆಗೆ ತೇಪೆ ಹಾಕುವ ಕೆಲಸವಾದರೂ ಮಾಡದಿದ್ದರೆ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಬಹುದು ಎನ್ನುತ್ತಾರೆ ಸ್ಥಳಿಯ ನಿವಾಸಿಗಳು.

ವಿವಿಧ ಕಾಮಗಾರಿಗಳಿಗಾಗಿ ಮಣ್ಣು ಸಾಗಿಸುವ ಟಿಪ್ಪರ್ ಲಾರಿಗಳ ಅತಿವೇಗದ ಸಂಚಾರ ಕೂಡ ದ್ವಿಚಕ್ರ ವಾಹನ ಸವಾರರಿಗೆ ಆಪತ್ತು ತರುತ್ತಿವೆ. ಅವುಗಳ ಅತಿವೇಗಕ್ಕೆ ಸಂಬಂಧಪಟ್ಟವರು ಕಡಿವಾಣ ಹಾಕಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಮಣಿಪಾಲ ವ್ಯಾಪ್ತಿಯ ಕೆಳಪರ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಲೇ ಇವೇ. ಇಲ್ಲಿರುವ ನಗರ ಸಭೆಯ ಪಂಪ್ಹೌಸ್ ಸಮೀಪ ಹಲವು ಬಾರಿ ಕಾರುಗಳು ನಿಯಂತ್ರಣ ತಪ್ಪಿ ಮಗುಚಿವೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು.ಪದೇ ಪದೇ ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಅಪಘಾತ ತಡೆಗೆ ಕ್ರಮ ವಹಿಸಬೇಕು ಎಂಬುದು ಜನರ ಆಗ್ರಹವಾಗಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿರುವ ಕಡೆಗಳಲ್ಲಿ ಎಚ್ಚರಿಕೆಯ ಫಲಕ ಅಳವಡಿಸಬೇಕು. ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು
ಗಣೇಶ್ರಾಜ್ ಸರಳೇಬೆಟ್ಟು ಸಾಮಾಜಿಕ ಕಾರ್ಯಕರ್ತ

‘ಕಾಮಗಾರಿ ಶೀಘ್ರ ಮುಗಿಸಲು ಸೂಚನೆ’

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಈಚೆಗೆ ಸಭೆ ನಡೆಸಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದ್ದೇವೆ. ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳನ್ನು ಅದಷ್ಟು ಶೀಘ್ರ ಮಗಿಸುವಂತೆಯೂ ಸೂಚನೆ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ. ಎಲ್ಲೆಲ್ಲಿ ಸರ್ವಿಸ್ ರಸ್ತೆಗಳು ಅಗತ್ಯವಿದೆ ಎಂಬುದನ್ನು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

‘ಅವೈಜ್ಞಾನಿಕ ಹೆದ್ದಾರಿಗಳಿಂದ ಆಪತ್ತು’

ಉಡುಪಿ ಮಂಗಳೂರು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳು ಅತ್ಯಂತ ಅವೈಜ್ಞಾನಿಕವಾಗಿವೆ. ಮಾತ್ರವಲ್ಲ ಹೆದ್ದಾರಿ ನಿಮಿ೯ಸುವಾಗ ರಸ್ತೆಯ ಬದಿಯಲ್ಲಿ ಪಾದಚಾರಿಗಳಿಗೆ ಸ್ವಲ್ಪವೂ ಕೂಡ ದಾರಿ ಬಿಟ್ಟಿಲ್ಲ. ಜನಸಾಮಾನ್ಯರ ಬಗ್ಗೆಯಾಗಲಿ ಅವರ ಜೀವದ ಬಗ್ಗೆಯಾಗಲಿ ಗಮನ ಹರಿಸದೇ ಇರುವುದನ್ನು ಕಾಣಬಹುದು ಎಂದು ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಹೇಳಿದ್ದಾರೆ. ಬೈಂದೂರಿನಿಂದ ಮಂಗಳೂರಿನ ತನಕ ಮಲ್ಪೆಯಿಂದ ಆಗುಂಬೆಯ ತನಕ ಎಲ್ಲಿಯೂ ಪಾದಚಾರಿಗಳು ರಸ್ತೆ ದಾಟಲು ಜೀಬ್ರಾ ಕ್ರಾಸ್ ಆಗಲಿ ಸಿಗ್ನಲ್ ವ್ಯವಸ್ಥೆಯಾಗಲಿ ಸುರಕ್ಷಿತವಾಗಿ ದಾಟಿ ಹೇೂಗಲು ಅಂಡರ್ ಪಾಸ್ ದಾರಿಯಾಗಲಿ ಇಲ್ಲ ಎಂದಿದ್ದಾರೆ. ಕನಿಷ್ಠಪಕ್ಷ ಜನಸಂದಣಿ ತಿರುವು ಇರುವ ಸ್ಥಳಗಳಲ್ಲಿ ವೇಗದ ಮಿತಿಯನ್ನಾದರು ಗುರುತಿಸಬಹುದಿತ್ತು. ಅದನ್ನೂ ಮಾಡಿಲ್ಲ ಎನ್ನುತ್ತಾರೆ ಅವರು.

ಮುಗಿಯದ ಕಾಮಗಾರಿ: ಅಪಘಾತ ಹೆಚ್ಚಳ

ಬ್ರಹ್ಮಾವರ: 2010ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ 17ಯಲ್ಲಿ(ಈಗ 66) ಕುಂದಾಪುರದಿಂದ ಸುರತ್ಕಲ್ ವರೆಗೆ ಸುಮಾರು 90.08 ಕಿ.ಮೀ ಉದ್ದದ 4 ಪಥದ ರಸ್ತೆ ರಚನೆಗೆ ₹671 ಕೋಟಿಯ ಪ್ರಸ್ತಾವನೆಗೆ ನವಯುಗ ಕಂಪನಿ ಜೊತೆ ಒಪ್ಪಂದ ಮಾಡಿ 2010ರ ಸೆಪ್ಟೆಂಬರ್ನಲ್ಲಿ ಮುಖ್ಯ ರಸ್ತೆ ಸರ್ವಿಸ್ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದರೂ ಇನ್ನೂ ಕೂಡ ಉದ್ದೇಶಿತ ಸರ್ವಿಸ್ ರಸ್ತೆಗಳು ಮೇಲ್ಸೇತುವೆ ನಿರ್ಮಾಣ ಆಗಿಲ್ಲ.

ತಾಲ್ಲೂಕಿನ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ರಸ್ತೆ ಕಾಮಗಾರಿಗಾರಿಯಿಂದ ಸಾವು– ನೋವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪ್ರಮುಖವಾಗಿ ತಾಲ್ಲೂಕಿನ ಬಸ್ ನಿಲ್ದಾಣ ಮಹೇಶ್ ಆಸ್ಪತ್ರೆ ಬಾರ್ಕೂರು ವೃತ್ತ ಉಪ್ಪಿನಕೋಟೆ ಮಾಬುಕಳ ಸಾಸ್ತಾನ ಸಾಲಿಗ್ರಾಮ ಕಾರ್ಕಡ ಸಂಪರ್ಕ ರಸ್ತೆ ಕೋಟ ಹೈಸ್ಕೂಲ್(ಕೋಟ ಮೂರ್ಕೈ) ಬಳಿಯ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಆಗರವಾಗಿದೆ. ಬ್ರಹ್ಮಾವರ ಕೋಟ ಸಾಲಿಗ್ರಾಮ ಪರಿಸರದಲ್ಲಿ ಸರ್ವಿಸ್ ರಸ್ತೆ ಇನ್ನೂ ಪೂರ್ಣಗೊಂಡಿಲ್ಲ.

ಹಲವಾರು ಶೈಕ್ಷಣಿಕ ಸಂಸ್ಥೆಗಳು ಇಲ್ಲಿದ್ದು ಹೆದ್ದಾರಿಯಲ್ಲಿ ನಿರಂತರ ವಾಹನಗಳು ಸಂಚರಿಸುತ್ತಿರುವುದರಿಂದ ರಸ್ತೆ ದಾಟಲು ವಿದ್ಯಾರ್ಥಿಗಳು ಪರದಾಡಬೇಕಾಗುತ್ತಿದೆ. ಬ್ರಹ್ಮಾವರದಲ್ಲಿ ಸಮುದಾಯ ಆರೋಗ್ಯ ಕೇಂದ್ರ ತಾಲ್ಲೂಕು ಆಡಳಿತ ಕಚೇರಿ ಬಾರ್ಕೂರು ಕ್ರಾಸ್ ಉಪ್ಪಿನಕೋಟೆ ಎಲ್ಲಾ ಕಡೆ ಹೆದ್ದಾರಿ ದಾಟಿಯೇ ಹೋಗಬೇಕಾಗಿದೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಸ್ಥಳೀಯ ಹೋರಾಟಗಾರರು 20 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಬ್ರಹ್ಮಾವರದಲ್ಲಿ ಎಸ್.ಎಂ.ಎಸ್ನಿಂದ ಬಾರ್ಕೂರು ಕ್ರಾಸ್ವರೆಗೆ ಮೇಲ್ಸೇತುವೆ ನಿರ್ಮಾಣ ಮಾಬುಕಳ ಉಪ್ಪಿನಕೋಟೆಯಿಂದ ಎಸ್.ಎಂ.ಎಸ್ ಅಥವಾ ದೂಪದಕಟ್ಟೆಯವರೆಗೆ ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆಯ ನಿರ್ಮಾಣ ಸಾಲಿಗ್ರಾಮ ಮಾಬುಕಳ ಸಾಸ್ತಾನದಲ್ಲಿ ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸಿದಲ್ಲಿ ಮತ್ತು ಕೆಲವೆಡೆ ಮೇಲ್ಸೇತುವೆ ನಿರ್ಮಿಸಿದಲ್ಲಿ ಪರಿಹಾರ ಕಂಡುಕೊಳ್ಳಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಮತ್ತೆ ಹೋರಾಟಕ್ಕಿಳಿದ ಜನ:

15ದಿನಗಳ ಹಿಂದೆ ಶಾಲಾ ಬಾಲಕನ ಸಾವು ಜನರನ್ನು ಮತ್ತೆ ಎಚ್ಚರಿಸಿದೆ. ತುರ್ತಾಗಿ ಸರ್ವಿಸ್ ರಸ್ತೆಯನ್ನು ಭದ್ರಗಿರಿಯಿಂದ ಮಾಬುಕಳದ ವರೆಗೆ ಹೆದ್ದಾರಿಯ ಎಡ ಮತ್ತು ಬಲ ಭಾಗದಲ್ಲಿ ರಚಿಸಬೇಕು ಕಾಲಮಿತಿಯೊಳಗೆ ಮೇಲ್ಸೇತುವೆ ರಚನೆಯಾಗಬೇಕು ಎನ್ನುವ ಬಗ್ಗೆ ಮತ್ತೆ ಹೋರಾಟ ಮಾಡಲಾಗಿತ್ತು. ಜಿಲ್ಲಾಧಿಕಾರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜನಪ್ರತಿನಿಧಿಗಳ ಸಮ್ಮುಖ ಸಭೆಗಳು ನಡೆದು ಸರ್ವಿಸ್ ರಸ್ತೆ ಶೀಘ್ರದಲ್ಲೇ ಆರಂಭಿಸಲಾಗುವುದು ಎನ್ನುವ ನಿರ್ಣಯ ಕೈಗೊಳ್ಳಲಾಗಿತ್ತಾದರೂ ಒಂದು ವಾರವಾದರೂ ಕಾಮಗಾರಿ ಆರಂಭಿಸಿಲ್ಲ. ಇನ್ನೊಂದು ಅಫಘಾತವಾಗಿ ಸಾವು ನೋವು ಆಗವ ಮುನ್ನ ಸರ್ವಿಸ್ ರಸ್ತೆಯ ನಿರ್ಮಾಣವಾಗಲಿ ಎನ್ನುತ್ತಾರೆ ಸ್ಥಳೀಯರು.

ಅಸಮರ್ಪಕ ಕಾಮಗಾರಿ

ಕಾರ್ಕಳ: ತಾಲ್ಲೂಕಿನಿಂದ ಹಾದು ಹೋಗುವ ಹೆದ್ದಾರಿಗಳ ಕಾಮಗಾರಿ ಅಸಮರ್ಪಕವಾಗಿರುವುದು ವಾಹನ ಸವಾರರಿಗೆ ಸರಿಯಾದ ಸೂಚನಾ ಫಲಕಗಳನ್ನು ಅಳವಡಿಸಿರುವುದು ಅವೈಜ್ಞಾನಿಕ ರಸ್ತೆ ಉಬ್ಬುಗಳು ರಸ್ತೆ ಉಬ್ಬುಗಳಿಗೆ ಬಿಳಿ ಮಾರ್ಕಿಂಗ್ ಇಲ್ಲದಿರುವುದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ತಾಲ್ಲೂಕಿನ ಸಾಣೂರು ಮೂಲಕ ಬಿಕರ್ನಕಟ್ಟೆ ತನಕ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಇದೇ ಅವ್ಯವಸ್ಥೆ ಮುಂದುವರಿದಿದೆ. ಸಾರ್ವಜನಿಕರು ಪ್ರತಿಭಟನೆಗೆ ಸಿದ್ಧರಾದಾಗ ದುರಸ್ತಿ ಕಾರ್ಯಗಳು ವೇಗ ಪಡೆಯುತ್ತಿವೆ. ರಾಜ್ಯ ಹೆದ್ದಾರಿಗೆ ತಾಗಿಕೊಂಡಿರುವ ಸರ್ವಿಸ್ ರಸ್ತೆಗೆ ತಿರುವುಗಳಲ್ಲಿ ಮಣ್ಣು ಕಲ್ಲು ರಾಶಿ ಹಾಕುವ ಕಾರಣ ಗುಂಡಿಗಳನ್ನು ತೋಡಿದ್ದರಿಂದ ವಾಹನ ಸವಾರರಿಗೆ ಕಷ್ಟವಾಗುತ್ತಿದೆ.

ಹೆಚ್ಚುತ್ತಿವೆ ಅಪಘಾತಗಳು

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಉಚ್ಚಿಲ ಹಾಗೂ ಹೆಜಮಾಡಿಯಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಉಚ್ಚಿಲ ಪೇಟೆ ಎರ್ಮಾಳು ಬಡಾ ಪೆಟ್ರೋಲ್ ಬಂಕ್ ಬಳಿ ಕಲ್ಸಂಕ ಬಳಿ ಪಡುಬಿದ್ರಿ ಜಂಕ್ಷನ್ ಹಾಗೂ ಹೆಜಮಾಡಿ ಬೀಡು ಬಳಿ ಅಪಘಾತಗಳು ಸಂಭವಿಸುತ್ತಿರುತ್ತವೆ. ಅಪಘಾತಗಳಿಂದ ಪ್ರಾಣಹಾನಿಯೂ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಕಾರ್ಕಳ-ಪಡುಬಿದ್ರಿ ರಸ್ತೆಯ ಜಂಕ್ಷನ್ ಬಳಿ ಪ್ರತಿನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ. ಇಲ್ಲಿ ಮೇಲ್ಸೇತುವೆ ಆಗಬೇಕು ಎಂಬ ಬೇಡಿಕೆ ಬಹುಕಾಲದಿಂದಲೂ ಇತ್ತು. ಆದರೆ ಪಡುಬಿದ್ರಿ ಹೆದ್ದಾರಿಯ ಡಿವೈಡರ್ ಅನ್ನು ಅಗಲ ಕಿರಿದುಗೊಳಿಸಿರುವುದರಿಂದ ಇಲ್ಲಿ ಅಪಘಾತಗಳಿಗೆ ಆಹ್ವಾನ ನೀಡಿದಂತಾಗಿದೆ ಎಂದು ಜನರು ಹೇಳುತ್ತಾರೆ. ಹೆಜಮಾಡಿ ಪೇಟೆಯನ್ನು ಸಂಪರ್ಕಿಸಲು ಪಡುಬಿದ್ರಿ ಬೀಡು ಬಳಿಯಿಂದ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಈ ಭಾಗದ ಜನರು ಬೇಡಿಕೆ ಇಟ್ಟರೂ ಯಾವುದೇ ಮನವಿಗೆ ಇದುವರೆಗೂ ಹೆದ್ದಾರಿ ಪ್ರಾಧಿಕಾರ ಸ್ಪಂದಿಸಿಲ್ಲ.

ಪೂರಕ ಮಾಹಿತಿ: ಶೇಷಗಿರಿ ಭಟ್, ಹಮೀದ್ ಪಡುಬಿದ್ರಿ, ವಾಸುದೇವ ಭಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.