ಉಡುಪಿ : ಭೂಗತ ಪಾತಕಿ ಬನ್ನಂಜೆ ರಾಜನಿಗೆ ತಾಯಿ ವಿಲಾಸಿನಿ ಶೆಟ್ಟಿಗಾರ್ ಅವರ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಲ್ಲು ನ್ಯಾಯಾಲಯ ಅನುಮತಿ ನೀಡಿದೆ.

ಆ.27ರಂದುಮಲ್ಪೆಯ ಬಾಪು ತೋಟದಲ್ಲಿ ನಡೆಯಲಿರುವ ಶವ ಸಂಸ್ಕಾರದಲ್ಲಿ ಭೂಗತ ಪಾತಕಿ ಬನ್ನಂಜೆ ರಾಜ ಭಾಗವಹಿಸಲಿದ್ದು, ಅ.28ರಂದು ಜೈಲಿಗೆ ಬಿಗ್ಗಿ ಪೊಲೀಸ್ ಬಂದೋಬಸ್ತ್ನಲ್ಲಿ ಬೆಳಗಾವಿ ಹಿಂಡೆಲಗಾ ಜೈಲಿಗೆ ತೆರಳಿದ್ದಾರೆ ಮೂಲಗಳು ತಿಳಿಸಿವೆ.

ಘಟನೆ ವಿವರ:ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಪರಿಣಾಮ ಅವರ ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಕೂಡಲೇ ಅವರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ಮಾಡಿದ ವೈದ್ಯರು ವಿಲಾಸಿನಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಮೃತರು ನಿವೃತ್ತಿ ಬಳಿಕ ಮಲ್ಪೆ ಸರ್ಕಾರಿ ಕಾಲೇಜು ಸಮೀಪದ ಮನೆಯೊಂದರಲ್ಲಿ ಜೀವನ ನಡೆಸುತ್ತಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದರು.ಕಳೆದ ತಿಂಗಳಷ್ಟೇ ಬೆಳಗಾವಿ ಹಿಂಡೆಲಗಾ ಜೈಲಿನಿಂದ ವಿಶೇಷ ಅನುಮತಿ ಪಡೆದುಕೊಂಡು ತಾಯಿಯ ಆರೋಗ್ಯ ವಿಚಾರಿಸಲು ಉಡುಪಿಗೆ ಬಂದಿದ್ದ ಬನ್ನಂಜೆ ರಾಜ ಮಲ್ಪೆಯ ಕಲ್ಮಾಡಿಗೆ ಬಂದು ತಾಯಿ ಜೊತೆ ಒಂದು ದಿನ ಸಮಯವೂ ಕಳೆದಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.