ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರಪುರ ಮಲ್ಲಿಗೆ ದರ ಹೆಚ್ಚಳಕ್ಕೆ ಮನವಿ

Last Updated 20 ಅಕ್ಟೋಬರ್ 2022, 5:57 IST
ಅಕ್ಷರ ಗಾತ್ರ

ಶಿರ್ವ: ಶಂಕರಪುರ ಮಲ್ಲಿಗೆಯ ಕನಿಷ್ಠ ದರ ಹೆಚ್ಚಿಸುವಂತೆ ಒತ್ತಾಯಿಸಿ ಶಂಕರಪುರ ಮಲ್ಲಿಗೆ ಬೆಳೆಗಾರರ ಸಂಘದವರು ಮಲ್ಲಿಗೆ ವರ್ತಕರ ಸಂಘದ ಅಧ್ಯಕ್ಷ ಇಗ್ನೇಷಿಯಸ್ ಡಿಸೋಜ ಮತ್ತು ಇತರ ವರ್ತಕರಿಗೆ ಮನವಿ ಸಲ್ಲಿಸಿದರು.

ಹವಾಮಾನ ವೈಪರೀತ್ಯ, ಕೀಟ ಬಾಧೆ ಇತ್ಯಾದಿಗಳಿಂದಾಗಿ ಮಲ್ಲಿಗೆ ಬೆಳೆಗಾರರು ಸಂಕಷ್ಟದಲ್ಲಿದ್ದು ಇಳುವರಿ ಕುಂಠಿತವಾಗುತ್ತಿದೆ.

ಮಲ್ಲಿಗೆ ಬೆಳೆಗಾರರು ಮತ್ತು ಅವರ ಅವಲಂಬಿತರ ಹಿತಾಸಕ್ತಿ ರಕ್ಷಿಸಲು ಹೆಚ್ಚಿನ ದರ ನಿಗದಿಗೊಳಿಸಿ ದರ ಸಮತೋಲನಕ್ಕೆ ಪ್ರಯತ್ನಿಸಬೇಕು ಎಂದು ವಿನಂತಿಸಲಾಯಿತು.

ಸಂಘದ ಗೌರವಾಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಸಂಘದ ಅಧ್ಯಕ್ಷ ಹಾಗೂ ಕುರ್ಕಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ಶೆಟ್ಟಿ ಬಿಳಿಯಾರು, ಪ್ರಧಾನ ಕಾರ್ಯದರ್ಶಿ ಭಾಸ್ಕರ ಆಚಾರ್ಯ ಬಿಳಿಯಾರು, ಸದಸ್ಯರಾದ ಅಶೋಕ್ ಅಮೀನ್, ಅರುಣ್ ಮಡಿವಾಳ, ಪ್ರಮೀಳ ಗಣೇಶ ಆಚಾರ್ಯ, ರಜನಿ, ಜಯಂತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT