ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ನೋಂದಣಿಗೆ ‘ವಾಕ್‌ಟ್ರ್ಯಾಕ್‌’ ಆ್ಯಪ್‌ ಅಭಿವೃದ್ಧಿಪಡಿಸಿದ ಯುವಕರು

ಸಾಲಿಗ್ರಾಮ ಗ್ರಾಮೀಣ ಭಾಗದ ಯುವಕರಿಂದ ಅಭಿವೃದ್ಧಿ
Last Updated 25 ಜೂನ್ 2021, 3:29 IST
ಅಕ್ಷರ ಗಾತ್ರ

ಸಾಲಿಗ್ರಾಮ (ಬ್ರಹ್ಮಾವರ): ಸಾಲಿಗ್ರಾಮ ಕಾರ್ಕಡದ ಯುವಕರು ಕೋವಿಡ್‌ ಲಸಿಕೆ ನೋಂದಣಿ ಮಾಡಿಕೊಳ್ಳುವುದಕ್ಕೆ ‘ವಾಕ್‍ಟ್ರ್ಯಾಕ್’ ಎಂಬ ಆ್ಯಪ್‌‍ವೊಂದನ್ನು ಅಭಿವೃದ್ಧಿಪಡಿಸಿದ್ದು, ಹಲವರು ಈ ಆ್ಯಪ್‌ನ ಪ್ರಯೋಜನ ಪಡೆಯುತ್ತಿದ್ದಾರೆ.

ಕೋವಿನ್, ಆರೋಗ್ಯ ಸೇತು ಆ್ಯಪ್‌‍ಗಳ ಮೂಲಕ ಈಗಾಗಲೇ ಲಸಿಕೆ ಪಡೆಯಲು ನೋಂದಣಿಗೆ ಅವಕಾಶವಿದೆ. ನೋಂದಣಿ ನಂತರ ಲಸಿಕೆ ಲಭ್ಯತೆ ಕುರಿತ ಸಂದೇಶ ಬರುವ ವ್ಯವಸ್ಥೆ ಈ ಆ್ಯಪ್‌‍ಗಳಲ್ಲಿದೆ. ಕೆಲಸದ ಒತ್ತಡದಲ್ಲಿ ಹಲವರು ಇಂತಹ ಸಂದೇಶಗಳನ್ನು ನೋಡುವುದು ಅಪರೂಪ.

ಆದರೆ, ಇದೆಕ್ಕೆಲ್ಲ ಪರಿಹಾರ ಎಂಬಂತೆ ನೋಂದಣಿ ಮಾಡಿದವರಿಗೆ ಲಸಿಕೆ ಲಭ್ಯತೆಯ ಸಮಯದಲ್ಲಿ ‘ಅಲಾರಾಂ’ ಮೂಲಕ ಎಚ್ಚರಿಸುವ ವಿನೂತನ ತಂತ್ರಜ್ಞಾನವನ್ನು ಸಾಲಿಗ್ರಾಮ ಕಾರ್ಕಡದ ಸಾಫ್ಟ್‌ವೇರ್ ಎಂಜಿನಿಯರ್‌ಗಳಾದ ರಾಮದಾಸ್ ನಾಯಕ್ ಮತ್ತು ಕಾರ್ತಿಕ್ ಕಾಮತ್ ಅವರು ವಾಕ್‍ಟ್ರ್ಯಾಕ್‍ ಆ್ಯಪ್‌ನಲ್ಲಿ (vacTrack) ಅಳವಡಿಸಿದ್ದಾರೆ.

ಆ್ಯಪ್‌ ಹೇಗೆ ಕೆಲಸ ಮಾಡುತ್ತೆ: ಗೂಗಲ್ ಪ್ಲೇ ಸ್ಟೋರ್‌ನಿಂದ ವಾಕ್‍ಟ್ರ್ಯಾಕ್ ಆ್ಯಪ್‌‍ಅನ್ನು ಡೌನ್‍ಲೋಡ್ ಮಾಡಿಕೊಂಡು ವ್ಯಕ್ತಿ ಇರುವ ಸ್ಥಳದ ಪಿನ್‍ಕೋಡ್‍ ನಮೂದಿಸಿ, ಸಬ್‍ಮಿಟ್ ಮಾಡಿದಲ್ಲಿ, ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಲಸಿಕೆ ಮಾಹಿತಿ ಸಿಗುತ್ತದೆ.

‘ನಂತರ ನೋಂದಣಿಗಾಗಿ ನೇರವಾಗಿ ಕೋವಿನ್ ಆ್ಯಪ್‌‍ಗೆ
ಲಿಂಕ್ ಒದಗಿಸುತ್ತದೆ. ಲಸಿಕೆ ಲಭ್ಯವಾಗುವ ದಿನದಂದು ‘ಅಲಾರಾಂ’ ಮೂಲಕ ಆ ವ್ಯಕ್ತಿಗೆ ಸಂದೇಶ ನೀಡುತ್ತದೆ. ಬರುವ ದಿನಗಳಲ್ಲಿ ಲಸಿಕೆ ಪಡೆಯುವ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು 18 ವರ್ಷ ದಾಟಿದವರಿಗೆ ಇದರಿಂದ ಪ್ರಯೋಜನವಾಗಲಿದೆ’ ಎಂದು ರಾಮದಾಸ್ ನಾಯಕ್ ಅವರು ಹೇಳುತ್ತಾರೆ.

‘ಗ್ರಾಮೀಣ ಜನರ ಅನುಕೂಲಕ್ಕಾಗಿ ಸರಳ ಆ್ಯಪ್‌ ಅಭಿವೃದ್ಧಿ’

ಹೊಸ ಅಪ್ಲಿಕೇಶನ್‍ಗಳ ಮೂಲಕ ಕೋವಿಡ್‌ ಲಸಿಕೆ ಪಡೆಯಲು ನೋಂದಣಿ ಮಾಡಲಾಗುತ್ತಿದ್ದು, ಆದರೆ ಗ್ರಾಮೀಣ ಭಾಗದ ಜನರು ಇನ್ನೂ ಕೂಡ ಅಂಡ್ರಾಯ್ಡ್‌ ಮೊಬೈಲ್‍ಗಳನ್ನು ಬಳಕೆ ಮಾಡದೇ ಇರುವುದರಿಂದ ಇದರ ಪ್ರಯೋಜನ ಪಡೆಯುತ್ತಿಲ್ಲ. ಬರುವ ದಿನಗಳಲ್ಲಿ ಅವರಿಗಾಗಿಯೇ ಲಸಿಕೆ ನೋಂದಣಿಗೆ ಅನುಕೂಲವಾಗುವಂತೆ ಅತ್ಯಂತ ಸರಳ ಆ್ಯಪ್‍ ಹೊರತರಲು ಯೋಚಿಸಲಾಗುತ್ತಿದೆ ಎಂದು ಸಾಲಿಗ್ರಾಮದ ಸಾಫ್ಟವೇರ್‌ ಎಂಜಿನಿಯರ್‌ ರಾಮದಾಸ್ ನಾಯಕ್ ಹೇಳಿದರು.

ಗ್ರಾಮೀಣ ಜನರು ಆಂಡ್ರಾಯ್ಡ್‌ ಮೊಬೈಲ್‍ ಬಳಕೆ ಮಾಡುತ್ತಿಲ್ಲ. ಇಂತಹ ಜನರ ಲಸಿಕೆ ನೋಂದಣಿಗೆ ಅನುಕೂಲವಾಗುವಂತೆ ಸರಳ ಆ್ಯಪ್‍ ಹೊರತರಲು ಯೋಚಿಸಲಾಗುತ್ತಿದೆ ರಾಮದಾಸ್ ನಾಯಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT