ಕಾರ್ಕಳದಲ್ಲಿ ಸುಳಿಗಾಳಿಯ ಅಬ್ಬರ

ಕಾರ್ಕಳ: ನಗರದ ಗಾಂಧಿ ಮೈದಾನದಲ್ಲಿ ಆಕಾಶದೆತ್ತರಕ್ಕೆ ಸುಳಿಗಾಳಿ ಕಾಣಿಸಿಕೊಂಡಿತು. ಈ ಪ್ರಾಕೃತಿಕ ವಿದ್ಯಮಾನ ಕಂಡು ಗಾಂಧಿ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರು ಹಾಗೂ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.
ಸುಳಿಯಾಕಾರದಲ್ಲಿ ಧೂಳು ಹಾಗೂ ಗಾಳಿ ಮುಗಿಲೆತ್ತರಕ್ಕೆ ಚಿಮ್ಮಿತು. ಮೈದಾನದಲ್ಲಿದ್ದ ಕಸ, ಗಿಡಗಂಟಿಯನ್ನೆಲ್ಲ ಮೇಲಕೆತ್ತಿ ಬಿಸಾಡಿತು. ಕೆಲ ನಿಮಿಷಗಳ ಕಾಲ ಜನರು ಸುಳಿಗಾಳಿಯ ವೀಕ್ಷಿಸಿದರು.
ಕಾರ್ಕಳ ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶವಾಗಿದ್ದು ಮೂಡುಬಿದರೆ, ಅಜೆಕಾರು, ಬೆಳಪು ಪರಿಸರದಲ್ಲೂ ಹಿಂದೆ ಸುಳಿಗಾಳಿ ಕಾಣಿಸಿಕೊಂಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.