ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಭಾರ ಕುಸಿತ: ಬಿರುಗಾಳಿ ಸಹಿತ ಮಳೆ

ಮಹಾ ಚಂಡಮಾರುತದ ಪ್ರಭಾವ: ಕಡಲಿಗಿಳಿಯದಂತೆ ಎಚ್ಚರಿಕೆ
Last Updated 31 ಅಕ್ಟೋಬರ್ 2019, 15:58 IST
ಅಕ್ಷರ ಗಾತ್ರ

ಉಡುಪಿ: ಅರಬ್ಬಿಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಲಕ್ಷದ್ವೀಪದಲ್ಲಿ ‘ಮಹಾ’ ಚಂಡಮಾರುತ ಎದ್ದಿದ್ದು ವಾಯವ್ಯ ದಿಕ್ಕಿನೆಡೆಗೆ ಬರುತ್ತಿದೆ. ರಾಜ್ಯದ ಕರಾವಳಿ ಭಾಗದಲ್ಲಿನ.1ರಂದು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದುಹವಾಮಾನ ಇಲಾಖೆ,ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ಮುನ್ಸೂಚನೆ ನೀಡಿದೆ.

ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆಯಲ್ಲಿ ಮೀನುಗಾರರು, ಪ್ರವಾಸಿಗರು ಸಮುದ್ರಕ್ಕೆ ಇಳಿಯಬಾರದು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕು. ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ತುರ್ತು ಸೇವೆಗೆ ಟೋಲ್ ಫ್ರೀ ನಂ:1077, ದೂರವಾಣಿ: 0820-2574802 / 2574360 ಸಂಪರ್ಕಿಸಬಹುದು.

ಕೊಮೊರಿನ್‌ ಮಾಲ್ಡಿವ್ಸ್‌, ಕೇರಳ ಹಾಗೂ ಕರ್ನಾಟಕ ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದೆ. ಪೂರ್ವ ಮಧ್ಯ ಅರಬ್ಬಿ ಸಮುದ್ರ ಹಾಗೂ ಲಕ್ಷ ದ್ವೀಪದಲ್ಲಿ ಒಂದು ಮೀಟರ್‌ಗಿಂತ ಎತ್ತರದ ಅಲೆಗಳು ಏಳುತ್ತಿವೆ. ಚಂಡಮಾರುತ ಪ್ರಭಾವದಿಂದ ಕರಾವಳಿಯಾದ್ಯಂತ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಳಿಗ್ಗೆ ಬಿಸಿಲು; ಮಧ್ಯಾಹ್ನ ಮಳೆ: ಗುರುವಾರ ಬೆಳಿಗ್ಗೆ ನಗರದಲ್ಲಿ ಬೇಸಗೆಯ ವಾತಾವರಣ ಇತ್ತು. ಮಧ್ಯಾಹ್ನವಾಗುತ್ತಲೇ ದಟ್ಟವಾದ ಮೋಡ ಕವಿಯಿತು. ಕೆಲವೇ ಕ್ಷಣಗಳಲ್ಲಿ ಬಿರುಸಾಗಿ ಮಳೆ ಸುರಿಯಿತು. ಮಧ್ಯಾಹ್ನದಿಂದ ರಾತ್ರಿಯವರೆಗೂ ಜಿಟಿಜಿಟಿ ಮಳೆ ಸುರಿಯುತ್ತಲೇ ಇತ್ತು. ಜತೆಗೆ, ತಂಪಾದ ವಾತಾವರಣ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT