ಉಡುಪಿ: ಕುಂದಾಪುರದ ಕುಂಭಾಶಿಯ ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಾಕಿರುವ ಯಕ್ಷಗಾನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

‘ಯಾರೇ ನೀನು ಭುವನ ಮೋಹಿನಿ’ ಎಂಬ ಹಾಡಿಗೆ ಅಶ್ವಿನಿ ಹಾಗೂ ತಮ್ಮ ಶ್ರೀಚರಣ ಹೆಜ್ಜೆಹಾಕಿದ್ದಾರೆ.ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು ಮೆಚ್ಚುಗೆ ಸೂಚಿಸಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಯಕ್ಷಗಾನದ ರಸದೌತಣ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

‘ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಒಂದೇ ಒಂದು ಚಟ ಅದು ಕಲೆ; ಯಾವ ಕೊರೊನಾಕ್ಕೂ ಈ ಚಟವನ್ನು ತಪ್ಪಿಸಲಾಗದು, ನನ್ನೊಂದಿಗೆ ನನ್ನ ತಮ್ಮ ಶ್ರೀಚರಣನೂ ಜತೆಯಾಗಿದ್ದಾನೆ, ನೋಡಿ ಸದ್ಯಕ್ಕೆ ಇಷ್ಟೆ ಸಾದ್ಯ’ ಎಂಬ ಒಕ್ಕಣೆಯೊಂದಿಗೆ ಹಾಕಿರುವ ವಿಡಿಯೋ ಜಾಲತಾಣಿಗರ ಮನ ಗೆದ್ದಿದೆ.ಅಶ್ವಿನಿ ಕೊಂಡದಕುಳಿ ಖ್ಯಾತ ಯಕ್ಷಗಾನ ಕಲಾವಿದರಾದ ರಾಮಚಂದ್ರ ಕೊಂಡದಕುಳಿ ಅವರ ಪುತ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.