ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದು ಬಿತ್ತಿದ ಕನಸುಗಳೇ ಪ್ರೇರಣೆ: ಯಾಕೂಬ್ ಗುಲ್ವಾಡಿ

Last Updated 20 ಸೆಪ್ಟೆಂಬರ್ 2022, 2:02 IST
ಅಕ್ಷರ ಗಾತ್ರ

ಕುಂದಾಪುರ: ನನಗೆ ನನ್ನದೇ ಗುಜರಿ ಅಂಗಡಿಯಲ್ಲಿ ದೊರೆಯುತ್ತಿದ್ದ ವಾರ ಪತ್ರಿಕೆ, ಪಾಕ್ಷಿಕ ಹಾಗೂ ಪತ್ರಿಕೆಗಳಿಂದ ಓದುವ ಹವ್ಯಾಸ ಬೆಳೆಯಿತು ಹಾಗೂ ಕಲಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು. ಆಗ ಬಹುಮಾನ ಪಡೆಯಲು ಸಾಧ್ಯವಾಗದೆ ಇದ್ದರೂ ಈಗ ಬಹುಮಾನ ವಿತರಿಸಲು ಸಾಧ್ಯವಾಗಿರುವುದು ಅಂದು ಓದು ಬಿತ್ತಿದ ಕನಸುಗಳಿಂದಲೇ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಚಲನ ಚಿತ್ರ ನಿರ್ಮಾಪಕ ಯಾಕೂಬ್ ಗುಲ್ವಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಇಲ್ಲಿನ ಸಮುದಾಯ ಸಂಘಟನೆ ಹಮ್ಮಿಕೊಂಡಿದ್ದ ವಿಡಿಯೊ ಭಾಷಣ ಸ್ಪರ್ಧೆಯ ವಿಜೇತರಿಗೆ ಜೇಸಿ ಭವನದಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.‌

ಕುಂದಾಪುರದ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರಾಜು ಬೆಟ್ಟಿನ ಮನೆ, ಕ್ಯಾಥೊಲಿಕ್ ಸಭಾದ ಕಾರ್ಯದರ್ಶಿ ಶಾಂತಿ ಕ್ವಾಡ್ರೆಸ್, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದ ರಾಘವೇಂದ್ರ ಉಡುಪಿ, ಜೇಸಿಐ ಅಧ್ಯಕ್ಷೆ ನಾಗರತ್ನಾ ಹೇರ್ಳೆ ಇದ್ದರು.

ಸಮುದಾಯ ಕುಂದಾಪುರದ ಅಧ್ಯಕ್ಷ ಉದಯ ಗಾಂವ್ಕರ್ ಸ್ವಾಗತಿಸಿದರು. ಸಚಿನ್ ಅಂಕೋಲಾ ವಂದಿಸಿದರು. ರವೀಂದ್ರ ಕೋಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT