ಸಿದ್ದಾಪುರ: ಆರ್ಡಿ ಸರ್ಕಾರಿ ಪ್ರೌಢ ಶಾಲೆಯ ಸ್ಥಾಪಕ ದಾನಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮರಣೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶದಂತೆ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಎಂದು ಇತ್ತೀಚೆಗೆ ಮರುನಾಮಕರಣ ಮಾಡಲಾಯಿತು.

ಕುಂದಾಪುರ ತಾಲ್ಲೂಕಿನ ಆರ್ಡಿಯಂತಹ ಕುಗ್ರಾಮದಲ್ಲಿ ದಾನಿ ಚಾರ್ಮಕ್ಕಿ ನಾರಾಯಣ ಶೆಟ್ಟಿಯವರು ಮಲೆನಾಡು ಎಜುಕೇಶನ್ ಸೊಸೈಟಿ ನೇತೃತ್ವದಲ್ಲಿ 1963ರಲ್ಲಿ ಆರ್ಡಿಯಲ್ಲಿ ಸಿ.ಎನ್.ಎಸ್ ಬೋರ್ಡ್ ಹೈಸ್ಕೂಲ್ ನಿರ್ಮಾಣಗೊಂಡಿತು. ಇದರಿಂದ ಆರ್ಡಿ ಸುತ್ತಮುತ್ತಲ 10ಕ್ಕೂ ಹೆಚ್ಚು ಗ್ರಾಮದ ವಿದ್ಯಾರ್ಥಿಗಳಿಗೆ ಪ್ರೌಢಶಾಲೆ ವಿದ್ಯಾಭ್ಯಾಸ ದೊರೆಯಿತು. ಪ್ರಸ್ತುತ ಸುವರ್ಣ ವರ್ಷದ ಸಂದರ್ಭ ‘ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಅಲ್ಬಾಡಿ, ಆರ್ಡಿ’ ಎಂದು ಸಂಸ್ಥಾಪಕರ ಸವಿನೆನಪಿಗಾಗಿ ಸರ್ಕಾರದಿಂದ ಅಂಗೀಕೃತವಾಗಿ ಶುಕ್ರವಾರ ಮರುನಾಮಕರಣಗೊಂಡಿದೆ.

ಶಾಲೆಯ ಸ್ಥಾಪನೆಗೆ ಕಾರಣರಾದ ಅವರ ಹೆಸರನ್ನು ಶಾಲೆಗೆ 50ವರ್ಷದ ನಂತರ ಇಟ್ಟು ಗೌವರವಿಸುತ್ತಿರುವುದು ದಾನಿಗಳ ಕುಟುಂಬಕ್ಕೆ ನೀಡುವ ಅತ್ಯನ್ನತ ಗೌರವವಾಗಿದೆ ಎಂದು ಮರುನಾಮಕರಣ ಕಾರ್ಯಕ್ರಮ ಉದ್ಘಾಟಿಸಿ ವಿಜಯ ಬ್ಯಾಂಕಿನ ನಿವೃತ್ತ ಅಧಿಕಾರಿ ಮನೋಹರ ಹೆಗ್ಡೆ ನೂಜೆಟ್ಟು ಮಾತನಾಡಿದರು.

ಕುಂದಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೀಪಿಕಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಜಯದೇವ ಹೆಗ್ಡೆ ನೂಜೆಟ್ಟು ಬಾಲಕೃಷ್ಣ ಶೆಟ್ಟಿ ಮಡಾಮಕ್ಕಿ, ನಿವೃತ್ತ ಶಿಕ್ಷಕ ರಾಜೀವ ಶೆಟ್ಟಿ, ವಲಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸತೀಶ್ ಶೆಟ್ಟಿಗಾರ್, ಬೆಳ್ವೆ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ಶೆಟ್ಟಿ ಆರ್ಡಿ, ಬಾಬು ಪೂಜಾರಿ ಕೆಜಾರ್ಡಿ, ಗುತ್ತಿಗೆದಾರ ಮೋಹನದಾಸ ಶೆಟ್ಟಿ ಅಡೋಲ್, ವಿದ್ಯಾರ್ಥಿ ನಾಯಕ ಪ್ರವೀಣ, ಹಿರಿಯರಾದ ಸದಾಶಿವ ಶೆಟ್ಟಿ ಪಡುಮನೆ, ಬಾಲಕೃಷ್ಣ ಶೆಣೈ, ನಿವೃತ್ತ ಶಿಕ್ಷಕ ಚಿನ್ನಯ್ಯ ಹೆಗ್ಡೆ, ಕರುಣಾಕರ ಶೆಟ್ಟಿ ಕೊಂಜಾಡಿ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ವೈಶಾಲಿ ಆರ್. ರಾವ್ ಸ್ವಾಗತಿಸಿ, ಶಿಕ್ಷಕ ಉದಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರೇಮನಾಥ ತೋಳಾರ್ ಬೇಳಂಜೆ ವಂದಿಸಿದರು. ಮರುನಾಮಕರಣ ಕಾರ್ಯಕ್ರಮಕ್ಕೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಜಯದೇವ ಹೆಗ್ಡೆ ನೂಜೆಟ್ಟು, ಮೋಹನದಾಸ ಶೆಟ್ಟಿ, ಬೆಳ್ವೆ ಗ್ರಾಮಪಂಚಾಯಿತಿ ಸದಸ್ಯ ಸುರೇಶ್ ಶೆಟ್ಟಿ ಮುಂತಾದವರು ವಸ್ತು ರೂಪದ ನೆರವು ನೀಡಿ ಸಹಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.