ಉಡುಪಿ: ‘ಕ್ರೆಡಿಟ್ ವ್ಯವಹಾರಕ್ಕೆ ಮಾತ್ರ ಸೀಮಿತಗೊಳ್ಳದೆ ಸಹಕಾರಿ ಕ್ಷೇತ್ರದಲ್ಲಿರುವ ಹಲವು ಅವಕಾಶಗಳನ್ನು ಉಪಯೋಗಿಸಿಕೊಳ್ಳಲು ಕಾರ್ಯೋನ್ಮುಖರಾಗಬೇಕು. ಸಹಕಾರಿ ಕ್ಷೇತ್ರ ಎಂದರೆ ಕ್ರೆಡಿಟ್ ಮಾತ್ರ ಎಂಬ ಭಾವನೆಯಿಂದ ಹೊರಬರಬೇಕು’ ಎಂದು ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಉಡುಪಿ ತಾಲ್ಲೂಕು ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಸಭಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿಗಳು ಮೊದಲು ಸದಸ್ಯರಿಗಾಗಿ ಕೆಲಸ ಮಾಡುತ್ತಿದ್ದರು. ಆದರೆ ಕಾಯ್ದೆಗಳ ಬದಲಾವಣೆಯಿಂದಾಗಿ ಸರ್ಕಾರಕ್ಕಾಗಿ ದುಡಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಶೇ35ರಷ್ಟು ಲಾಭ ತೆರಿಗೆ ರೂಪದಲ್ಲಿ ಪಾವತಿಸಬೇಕಾಗಿದೆ. ಇಂತಹ ವ್ಯವಸ್ಥೆಯಲ್ಲಿ ದುಡಿದು ಲಾಭ ಮಾಡಿ ಡಿವಿಡೆಂಟ್ ನೀಡುವುದು ಕಷ್ಟ. ಯಾವುದೇ ಕಾಯ್ದೆ ಅಂತಿಮವಲ್ಲ, ಎಲ್ಲರ ಸಹಕಾರ ಇದ್ದರೆ ಕಾಯ್ದೆಯನ್ನು ಬದಲಾಯಿಸಬಹುದು ಎಂದು ಅವರು ಹೇಳಿದರು.

ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಈ ಕ್ಷೇತ್ರದಲ್ಲಿ ರಾಜಕೀಯ ಇದೆ. ಆದರೆ ಈ ರಾಜಕೀಯವನ್ನು ಚುನಾವಣೆಗೂ ಒಂದು ತಿಂಗಳ ಮೊದಲು ಆರಂಭಿಸಿ ಚುನಾವಣೆ ಮುಗಿದ 24 ಗಂಟೆಗಳ ಒಳಗೆ ಬಿಟ್ಟುಬಿಡಬೇಕು. ಆ ನಂತರವೂ ರಾಜಕೀಯ ಮುಂದುವರೆದರೆ ಸಹಕಾರ ಕ್ಷೇತ್ರಕ್ಕೆ ಧಕ್ಕೆ ಬರುತ್ತದೆ. ಅವಿಭಜಿತ ಜಿಲ್ಲೆಯಲ್ಲಿ ರಾಜಕೀಯ ಇದ್ದರೂ ಚುನಾವಣೆಯ ನಂತರ ಅದು ಇರುವುದಿಲ್ಲ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಎಸ್.ಆರ್. ಸತೀಶ್‌ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ನಿಯಮಿತದ ನಿರ್ದೇಶಕ ಭಾಸ್ಕರ ಕಾಮತ್, ಜಿಲ್ಲಾ ಸಹಕಾರ ಯೂನಿಯನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಬಿ. ಜಗದೀಶ್, ಉತ್ತರ ಕನ್ನಡ ಜಿಲ್ಲೆಯ ಲೆಕ್ಕಪರಿಶೋಧಕ ಸುಬ್ರಹ್ಮಣ್ಯ ಹೆಗ್ಡೆ, ಪ್ರಸನ್ನಕುಮಾರ್ ಮಂಗಳೂರು ಉಪಸ್ಥಿತರಿದ್ದರು. ಚೇತನಾ ಪ್ರಾರ್ಥಿಸಿದರು. ಶಿವಕುಮಾರ್ ಬಿರಾದರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.