ಶಿರಸಿ: ಸಾಹಸಿ ಚಿತ್ರದುರ್ಗದ ಜ್ಯೋತಿರಾಜ್ ಅವರು ಕಳೆದ 40 ದಿನಗಳಿಂದ ಇಲ್ಲಿನ ನಿಸರ್ಗಮನೆಯಲ್ಲಿ ಪ್ರಕೃತಿ ಚಿಕಿತ್ಸೆ ಪಡೆದು, 13 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.

ವೆನೆಜುವೆಲಾದ ಏಂಜಲ್ ಜಲಪಾತವನ್ನು ಹತ್ತುವ ಕನಸಿನಲ್ಲಿರುವ ಜ್ಯೋತಿರಾಜ್ ಅವರಿಗೆ ಅಧಿಕ ದೇಹಭಾರ ಸಮಸ್ಯೆಯಾಗಿ ಕಾಡುತ್ತಿದೆ. ಎರಡು ವರ್ಷಗಳ ಹಿಂದೆ ಜೋಗದಲ್ಲಿ ಜೀವರಕ್ಷಕ ಕಾರ್ಯಾಚರಣೆಯಲ್ಲಿರುವ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರು, ದೀರ್ಘಕಾಲಿಕ ವಿಶ್ರಾಂತಿ ಪಡೆದ ಪರಿಣಾಮ ಅವರ ದೇಹದ ತೂಕ ಹೆಚ್ಚಾಗಿತ್ತು. ನಿತ್ಯ ಓಡುವ ಮೂಲಕ ತೂಕವನ್ನು 86 ಕೆ.ಜಿ.ಗೆ ಇಳಿಸಿಕೊಂಡಿದ್ದರು. ನಂತರ ಯಾರಿಂದಲೋ ಮಾಹಿತಿ ಪಡೆದು, ಇಲ್ಲಿನ ಡಾ.ವೆಂಕಟರಮಣ ಹೆಗಡೆ ಅವರ ನಿಸರ್ಗಮನೆಗೆ ದಾಖಲಾಗಿದ್ದಾರೆ.

ಇಲ್ಲಿ ಡಾ.ಪ್ರವೀಣ ಜೇಕಬ್ ಅವರ ಮಾರ್ಗದರ್ಶನದಲ್ಲಿ ಜ್ಯೋತಿರಾಜ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 'ಜಗತ್ತಿನೆಲ್ಲೆಡೆ ಕೋವಿಡ್–19 ವೈರಸ್ ಸೋಂಕು ಇರುವುದರಿಂದ ಏಂಜಲ್ ಜಲಪಾತವನ್ನು ಹತ್ತುವ ಕಾರ್ಯಕ್ರಮ ಮುಂದೂಡಿದ್ದೇನೆ. ಇನ್ನು ಕೆಲ ದಿನ ಇಲ್ಲೇ ಉಳಿದು, ಚಿಕಿತ್ಸೆ ಮುಂದುವರಿಸುತ್ತೇನೆ. ದೇಹದ ತೂಕವನ್ನು 65 ಕೆ.ಜಿ.ಗೆ ಇಳಿಸಿಕೊಳ್ಳುವ ಇಚ್ಛೆಯಿದೆ’ ಎಂದು ಜ್ಯೋತಿರಾಜ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.