ಶನಿವಾರ, ಡಿಸೆಂಬರ್ 7, 2019
24 °C

ಕಾರವಾರ | ನೆರೆ ಪ್ರದೇಶದ ಜಾನುವಾರುಗಳಿಗೆ 22 ಲೋಡ್‌ ಮೇವು, 9 ಟನ್ ಹಿಂಡಿ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯ ನೆರೆ ಸಂತ್ರಸ್ತ ಪ್ರದೇಶಗಳ ಜಾನುವಾರಿಗೆ ರಾಮಚಂದ್ರಾಪುರ ಮಠ ಮತ್ತು ಭಾರತೀಯ ಗೋ ಪರಿವಾರದಿಂದ ಈಗಾಗಲೇ 22 ಲೋಡ್ ಒಣಮೇವು ಹಾಗೂ ಒಂಬತ್ತು ಟನ್ ಹಿಂಡಿ ವಿತರಿಸಲಾಗಿದೆ. 

ಈ ಬಗ್ಗೆ ಗೋ ಪರಿವಾರದ ಸಂಯೋಜಕ ಆರ್.ಕೆ.ಭಟ್ ಬೆಳ್ಳಾರೆ ಮತ್ತು ಮೇವು ವಿತರಣೆಯ ಉಸ್ತುವಾರಿ ವಹಿಸಿದ್ದ ವಿ.ಡಿ.ಭಟ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. 

ಅಂಕೋಲಾ ತಾಲ್ಲೂಕಿನ ಗುಂಡಬಾಳ, ಹಿಲ್ಲೂರು, ಕ್ಯಾಸರೆ, ಹೊಳೆಮಕ್ಕಿ, ಹಡಿನಗದ್ದೆ, ಮೊಗಟಾ, ಕಾಶಿಗದ್ದೆ, ಮಂಗನಕಾನ, ಬೋಗದ್ದೆ, ಹೆಗ್ರೆ, ಅಡಿಗೋಣ, ಬೈಲಕೇರಿ, ಬೆಳಸರೆ, ಜೂಗ, ಅಕ್ಕೋಡ, ಮತನಕುರ್ವೆ, ಹೆರೀಕೆರೆ, ಸಂಕನಕೋಡಿ, ಅಣ್ಣಿಕೇರಿ ಗ್ರಾಮಗಳಲ್ಲಿ ಜಾನುವಾರಿಗೆ ಮೇವು ಹಾಗೂ ಹಿಂಡಿ ವಿತರಿಸಲಾಯಿತು.

ಪ್ರವಾಹದಿಂದಾಗಿ ಮನೆ, ಆಸ್ತಿಗಳನ್ನು ಕಳೆದುಕೊಂಡವರು ತಮ್ಮ ಜಾನುವಾರಿಗೆ ಮೇವು ಒದಗಿಸಲಾಗದೇ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಹಲವು ಹೈನುಗಾರರು ಹಸು, ಕರುಗಳನ್ನು ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ರಾಮಚಂದ್ರಾಪುರ ಮಠವು ಗೋಪರಿವಾರದ ಮೂಲಕ ಮೇವು ಲಭ್ಯವಿರುವ ಸ್ಥಳಗಳಿಂದ ತರಿಸಿ ಉಚಿತವಾಗಿ ವಿತರಿಸಿದೆ.

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ, ಉದ್ಯಮಿ ಎನ್.ಎಚ್.ಇಲ್ಲೂರು, ಕುಷ್ಟಗಿ ಬಂಗಾರಶೆಟ್ಟಿ, ಗೋಕರ್ಣದ ಉಪಾಧಿವಂತ ಮಂಡಳಿ, ಸಹರಾ ಫೌಂಡೇಷನ್, ಮಂಜುನಾಥ್ ಪಾಟೀಲ ಹುಲ್ಲು ಖರೀದಿ ಹಾಗೂ ವಿತರಣೆಗೆ ನೆರವಾದರು. ವಿ.ಡಿ.ಭಟ್ ನೇತೃತ್ವದಲ್ಲಿ ರಮೇಶ ನಾಯಕ ಹಿಲ್ಲೂರು, ತ್ರಯಂಬಕ ಬಾಂದೇಕರ್, ರಾಮಾನಂದ ನಾಯಕ, ನಂದು ಗಾಂವ್ಕರ್, ವಿನಾಯಕ ನಾಯಕ, ಶಾಂತ ನಾಯಕ, ಗಣಪತಿ ಭಟ್ ಹಳ್ಳಿಹಳ್ಳಿಗಳಿಗೆ ತೆರಳಿ ಮೇವು ವಿತರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು