ಕಾರವಾರ: ಜಿಲ್ಲೆಯಲ್ಲಿ ಕೋವಿಡ್ 19ಪೀಡಿತರ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಸೋಮವಾರ ಒಂದೇ ದಿನ 24 ಜನರಿಗೆ ಸೋಂಕು ಖಚಿತವಾಗಿದೆ. ಈ ಪೈಕಿ ಯಲ್ಲಾಪುರದ ಏಳು, ಮುಂಡಗೋಡ ಮತ್ತು ಹೊನ್ನಾವರದ ತಲಾ ಆರು, ಕಾರವಾರದ ಇಬ್ಬರಿಗೆ, ಭಟ್ಕಳ, ಶಿರಸಿ ಮತ್ತು ಕುಮಟಾದ ತಲಾಒಬ್ಬರಿಗೆ ದೃಢಪಟ್ಟಿದೆ.

ಮುಂಡಗೋಡದ ಆರು ಮಂದಿಯ ಪೈಕಿ ಐವರು ಟಿಬೆಟನ್ ಕ್ಯಾಂಪ್‍ನ ಗಜಾಂಗ್ ಹಾಗೂ ಟಿ.ಸಿ.ವಿ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದವರಾಗಿದ್ದಾರೆ.ಅವರು ಈಗಾಗಲೇ ಸೋಂಕಿತರಾಗಿರುವ (ಪಿ 10178) ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು ಎಂದುತಹಶೀಲ್ದಾರ್ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.

ಮೂಲದ ಪತ್ತೆ ಕಾರ್ಯ:ಐವರಲ್ಲಿ 37 ವರ್ಷದ ಪುರುಷ, 83 ವರ್ಷದ ಮಹಿಳೆ, 51 ವರ್ಷದ ಪುರುಷ ಮತ್ತು 26 ವರ್ಷದ ಇಬ್ಬರು ಯುವಕರು ಸೇರಿದ್ದಾರೆ. ಆರನೇ ಸೋಂಕಿತ 20 ವರ್ಷದ ಯುವಕನಾಗಿದ್ದು, ಅವರಿಗೆ ಸೋಂಕು ಬಂದ ಮೂಲವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚುವ ಕಾರ್ಯದಲ್ಲಿದ್ದಾರೆ. ಆತ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ನಿರ್ವಾಹಕರಿಗೆಸೋಂಕು:ಕೋವಿಡ್ ದೃಢಪಟ್ಟಿರುವ, ಯಲ್ಲಾಪುರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕರ (ಪಿ 10649) ಪ್ರಾಥಮಿಕ ಸಂಪರ್ಕಕ್ಕೆ ಬಂದ ಆರು ಮಂದಿಗೆಸೋಂಕು ಖಚಿತವಾಗಿದೆ. ಅವರಲ್ಲಿ26 ವರ್ಷದ ಇಬ್ಬರು ಮತ್ತು 28 ಒಬ್ಬಯುವಕರು, 45, 42, 33 ವರ್ಷದ ಪುರುಷರು ಹಾಗೂ 45 ವರ್ಷದ ಮಹಿಳೆಸೇರಿದ್ದಾರೆ.

ಮುಂಡಗೋಡ ವರದಿ:ತಾಲ್ಲೂಕಿನ ಟಿಬೆಟನ್ ಕ್ಯಾಂಪ್‍ನಲ್ಲಿ ಇಲ್ಲಿಯವರೆಗೆ 11 ಜನರಿಗೆ ಕೋವಿಡ್ ಖಚಿತಗೊಂಡಿದ್ದು, ಒಬ್ಬರು ಗುಣಮುಖರಾಗಿದ್ದಾರೆ.

ಟಿಬೆಟನ್ ಕ್ಯಾಂಪ್‍ನಲ್ಲಿ ಜೂ.16ರಂದು ಮೊದಲ ಕೋವಿಡ್ ಪ್ರಕರಣ ಖಚಿತಗೊಂಡಿತ್ತು. ನಂತರದ 13 ದಿನಗಳಲ್ಲಿ 10 ಜನರಲ್ಲಿ ದೃಢಪಟ್ಟಿದೆ. ಇದು ಕ್ಯಾಂಪ್‍ನಲ್ಲಿ ಆತಂಕ ಉಂಟು ಮಾಡಿದೆ.

ಮಹಾರಾಷ್ಟ್ರದಿಂದ ಬಂದಿರುವ ಹೊನ್ನಾವರದ 30 ವರ್ಷ ಹಾಗೂ 65 ವರ್ಷದ ಮಹಿಳೆಯರು,39 ವರ್ಷ, 31, 53, 29 ವರ್ಷದ ಪುರುಷರು, ಶಿರಸಿಯ 41 ವರ್ಷದ ಮಹಿಳೆ ಹಾಗೂ ಕುಮಟಾದ 30 ವರ್ಷದ ಯುವಕನಿಗೆ ಕೋವಿಡ್ ಖಚಿತವಾಗಿದೆ. ಭಟ್ಕಳದ 50 ವರ್ಷದ ಪುರುಷ ಆಂಧ್ರಪ್ರದೇಶದ ವಿಜಯವಾಡಾದಿಂದ ಮರಳಿದ್ದರು. ಯಲ್ಲಾಪುರದ 33 ವರ್ಷದ ಪುರುಷ ಗೋವಾದಿಂದ ವಾಪಸಾಗಿದ್ದರು. ಅವರಿಗೂ ಕೋವಿಡ್ ದೃಢಪಟ್ಟಿದೆ.

ಉಳಿದಂತೆ, ಕಾರವಾರದ 23ಹಾಗೂ 25 ವರ್ಷ ಹಾಗೂ ಯಲ್ಲಾಪುರದ 33 ವರ್ಷದಯುವಕರಿಗೂ ಖಚಿತವಾಗಿದ್ದು,ಗೋವಾದಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು.

ಜಿಲ್ಲೆಯಲ್ಲಿ ಕೋವಿಡ್: ಅಂಕಿ ಅಂಶ

213

ಜಿಲ್ಲೆಯಲ್ಲಿ ಒಟ್ಟುವರದಿಯಾಗಿರುವುದು

24

ಸೋಮವಾರ ದೃಢಪಟ್ಟಿರುವುದು

154

ಗುಣಮುಖರಾದವರು

59

ಸಕ್ರಿಯ ಪ್ರಕರಣಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.