ಸೋಮವಾರ, ಅಕ್ಟೋಬರ್ 21, 2019
23 °C

ಮುಳುಗುತ್ತಿದ್ದ ದೋಣಿಯಿಂದ 28 ಮೀನುಗಾರರ ರಕ್ಷಣೆ

Published:
Updated:
Prajavani

ಭಟ್ಕಳ: ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಶುಕ್ರವಾರ ಮುಳುಗುತ್ತಿದ್ದ ದೋಣಿಯನ್ನು ಮತ್ತೊಂದು ದೋಣಿಯ ಮೀನುಗಾರರೇ ರ‌ಕ್ಷಿಸಿದ್ದಾರೆ. ಅದರಲ್ಲಿದ್ದ ಎಲ್ಲ 28 ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.

ಸಮುದ್ರ ದಡದಿಂದ 25 ನಾಟಿಕಲ್ ಮೈಲು (ಸುಮಾರು 46 ಕಿ.ಮೀ) ದೂರದ ಆಳ ಸಮುದ್ರದಲ್ಲಿ ಅವಘಡ ನಡೆದಿತ್ತು. ದೋಣಿಯು ಕುಂದಾಪುರ ತಾಲ್ಲೂಕಿನ ಗಂಗೊಳ್ಳಿಯ ಮಧುಕರ ಪೂಜಾರಿ ಎಂಬುವವರದ್ದಾಗಿದೆ. ‘ಮೂಕಾಂಬಿಕಾ’ ಹೆಸರಿನ ಆ ದೋಣಿಯಲ್ಲಿ ಭಟ್ಕಳ ಬಂದರಿನಿಂದ ಮೀನುಗಾರಿಕೆಗೆ ಹೋಗಲಾಗಿತ್ತು.

ದೋಣಿಯ ತಳಭಾಗ ಒಡೆದು ಮುಳುಗುವ ಹಂತ ತಲುಪಿದ್ದನ್ನು ಸಮೀಪದಲ್ಲೇ ಇದ್ದ ಇತರ ದೋಣಿಗಳ ಮೀನುಗಾರರು ಗಮನಿಸಿದರು. ಕೂಡಲೇ ರಕ್ಷಣೆಗೆ ಧಾವಿಸಿ ಕಾರ್ಯಾಚರಣೆ ಮಾಡಿದರು. ಸಂಜೆಯ ವೇಳೆಗೆ ದೋಣಿಯನ್ನು ಎಳೆದು ದಡಕ್ಕೆ ತರಲಾಯಿತು ಎಂದು ಸ್ಥಳೀಯರಾದ ಶಂಕರ ಮೊಗೇರ್ ಮಾಹಿತಿ ನೀಡಿದರು.

Post Comments (+)