ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಆರಂಭ: ಉತ್ತಮ ಪ್ರತಿಕ್ರಿಯೆ

Last Updated 2 ಜನವರಿ 2021, 3:57 IST
ಅಕ್ಷರ ಗಾತ್ರ

ಅಂಕೋಲಾ: ತಾಲ್ಲೂಕಿನ ಶಾಲಾ ಕಾಲೇಜು ಆರಂಭಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲೆಯ ಆರಂಭದ ಮೊದಲ ದಿನ 10ನೇ ತರಗತಿಯ ಶೇ 66.10 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ. ಒಟ್ಟು 29 ಶಾಲೆಗಳಲ್ಲಿ 10ನೇ ತರಗತಿಯ 1304 ವಿದ್ಯಾರ್ಥಿಗಳಿದ್ದು 862 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ.

ಕಾಲೇಜು ಹಂತದಲ್ಲಿ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳು ಕೂಡ ಕಾಲೇಜು ಆರಂಭಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ತಾಲೂಕಿನ ಒಟ್ಟು 984 ವಿದ್ಯಾರ್ಥಿಗಳಲ್ಲಿ 609 ವಿದ್ಯಾರ್ಥಿಗಳು ಮೊದಲನೇ ದಿನ ತರಗತಿಗೆ ಹಾಜರಾಗಿದ್ದಾರೆ. ಶಾಲೆ ಮತ್ತು ಕಾಲೇಜುಗಳಲ್ಲಿ ಪ್ರಾರಂಭೋತ್ಸವ ಆಚರಿಸಿ ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.

ಕೆಲವು ಕಡೆ ಶಾಲೆಯ ಆವರಣದಲ್ಲಿ ತೋರಣಗಳಿಂದ ಅಲಂಕರಿಸಿ ವಿದ್ಯಾರ್ಥಿಗಳಿಗೆ ಪುಷ್ಪ ನೀಡಿ ಸ್ವಾಗತಿಸಲಾಯಿತು. ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದೇಹದ ತಾಪಮಾನ ಪರೀಕ್ಷೆ ಮಾಡಲಾಯಿತು. ಸರ್ಕಾರದ ಆದೇಶದ ಅನ್ವಯ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಒಂದು ತರಗತಿ ಕೇವಲ 15
ವಿದ್ಯಾರ್ಥಿಗಳಿಗೆ ಅಷ್ಟೇ ಸೀಮಿತವಾಗಿತ್ತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಕಡೆಗಳಲ್ಲಿ ಶಿಕ್ಷಕರು ಹೆಚ್ಚುವರಿ ತರಗತಿಗಳನ್ನು ನಿರ್ವಹಿಸಲಾಯಿತು.

ಆನ್‌ಲೈನ್‌ ತರಗತಿ ಎಷ್ಟೇ ಉತ್ತಮವಾಗಿದ್ದರೂ ಕ್ಲಿಷ್ಟ ಸಮಸ್ಯೆಗಳು ಅರ್ಥವಾಗುತ್ತಿರಲಿಲ್ಲ. ತರಗತಿಯಲ್ಲಿ ನೇರವಾಗಿ ಉಪನ್ಯಾಸಕರೊಂದಿಗೆ ಸಂವಹನ ನಡೆಸಿ ಅರ್ಥವಾಗದ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಬಹುದು. ಕಾಲೇಜು ಆರಂಭದಿಂದ ಸಂತೋಷವಾಗಿದೆ ಎಂದು ವಿದ್ಯಾರ್ಥಿನಿ ಶ್ರೀದೇವಿ ಗೌಡ ಹೇಳಿದರು.

ಶಾಲೆಗಳ ಆರಂಭಕ್ಕೆ ಮತ್ತು ವಿದ್ಯಾಗಮ ಪುನರಾರಂಭಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ತಾಲ್ಲೂಕಿನ ಹೊರಗಿನ ವಿದ್ಯಾರ್ಥಿಗಳು ಮಾತ್ರ ತರಗತಿಗೆ ಗೈರು ಹಾಜರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಲಾ ನಾಯಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT