ಸೋಮವಾರ, ಅಕ್ಟೋಬರ್ 18, 2021
23 °C

ಗೋಕರ್ಣ: ಮತ್ತೊಂದು ಕಡಲಾಮೆಯ ಮೃತದೇಹ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಇಲ್ಲಿನ ಮೇನ್ ಬೀಚಿನಲ್ಲಿ ಮತ್ತೊಂದು ಕಡಲಾಮೆಯ ಮೃತದೇಹ ಸೋಮವಾರ ಪತ್ತೆಯಾಗಿದೆ. ಇದೇ ಸ್ಥಳದಲ್ಲಿ ಶನಿವಾರ ಕಡಲಾಮೆಯೊಂದರ ಕಳೇಬರ ಪತ್ತೆಯಾಗಿತ್ತು.

ಗಾತ್ರದಲ್ಲಿ ಚಿಕ್ಕದಿದ್ದು, ಮರಿ ಇರಬಹುದು ಎಂದು ಊಹಿಸಲಾಗಿದೆ. ಸುಮಾರು 5 ಕೆ.ಜಿ.ಗಳಷ್ಟು ತೂಕವಿದೆ. ಎರಡು ದಿವಸದಲ್ಲಿ ಇದು ಎರಡನೇ ಪ್ರಕರಣವಾಗಿದ್ದು, ಆಮೆಗಳು ಸಾಯಲು ನಿಖರವಾದ ಕಾರಣ ತಿಳಿದುಬಂದಿಲ್ಲ.

ಕಡಲತೀರವನ್ನು ಸ್ವಚ್ಛ ಮಾಡುವವರು ಮೊದಲು ನೋಡಿದ್ದು, ಲೈಫ್ ಗಾರ್ಡ್ ಮೇಲ್ವಿಚಾರಕ ರವಿ ನಾಯ್ಕ ಅವರ ಗಮನಕ್ಕೆ ತಂದರು. ಅವರು ಅರಣ್ಯ ಇಲಾಖೆಯವರಿಗೆ ತಿಳಿಸಿ, ಸ್ಥಳಕ್ಕೆ ಬಂದು ಪಂಚನಾಮೆ ಮಾಡಿ ಮುಂದಿನ ಕ್ರಮ ಕೈಗೊಂಡರು.

ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯ ಕರಾವಳಿಯ ವಿವಿಧೆಡೆ ಆರಕ್ಕೂ ಅಧಿಕ ಆಮೆಗಳು ಮೃತಪಟ್ಟಿದ್ದು ಬೆಳಕಿಗೆ ಬಂದಿದೆ. ಮೀನುಗಾರರ ಬಲೆಗೆ ಸಿಲುಕಿ ಸಾಯುತ್ತಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು