ಮಂಗಳವಾರ, ಮೇ 18, 2021
28 °C
ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಎಚ್ಚರಿಕೆ

ವೈಜ್ಞಾನಿಕ ಅಂಶ ಅಲ್ಲಗಳೆದರೆ ಪ್ರತಿಭಟನೆ: ಸರ್ಕಾರಕ್ಕೆ ಸ್ವರ್ಣವಲ್ಲಿ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯಿಂದ ಎದುರಾಗಬಹುದಾದ ಅನಾಹುತಗಳ ಕುರಿತು ಸರ್ಕಾರಕ್ಕೆ ಸಲ್ಲಿಸುವ ವೈಜ್ಞಾನಿಕ ಅಂಶಗಳನ್ನು ಅಲ್ಲಗಳೆದರೆ ಪ್ರತಿಭಟಿಸುವುದು ಅನಿವಾರ್ಯವಾಗಲಿದೆ ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಎಚ್ಚರಿಸಿದರು.

ಬೇಡ್ತಿ ಹಾಗೂ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಬೇಡ್ತಿ, ಅಘನಾಶಿನಿ-ವರದಾ ನದಿ ಜೋಡಣೆ ಯೋಜನೆಗಳ ಸಾಧಕ-ಬಾಧಕಗಳ ಕುರಿತು ಸಮಾಲೋಚನಾ ಕಾರ್ಯಾಗಾರ’ದಲ್ಲಿ ಮಾತನಾಡಿದ ಅವರು, ‘ವೈಜ್ಞಾನಿಕ ಚಿಂತನೆಯೊಂದಿಗೆ ಸರ್ಕಾರ ಸಾಗಲಿ. ಅದು ಸಾಧ್ಯವಾಗದಿದ್ದರೆ ಹೋರಾಟ ಅನಿವಾರ್ಯ’ ಎಂದರು.

ಓದಿ: ಆಳ–ಅಗಲ: ಕರಾವಳಿ ಮೇಲೆ ಬೇಡ್ತಿ–ವರದಾ ಜೋಡಣೆಯ ಕಾರ್ಮೋಡ

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ‘ನದಿ ತಿರುವು ಯೋಜನೆಯಿಂದ ಪಶ್ಚಿಮ ಘಟ್ಟದಲ್ಲಿ ಭೂ ಕುಸಿತ ಹೆಚ್ಚಲಿದೆ. ಸರ್ಕಾರ ಈ ಯೋಜನೆಯನ್ನು ಮರು ಪರಿಶೀಲಿಸಬೇಕು’ ಎಂದರು.

ದಿಕ್ಸೂಚಿ ಭಾಷಣ ಮಾಡಿದ ವಿಜ್ಞಾನ ಲೇಖಕ ನಾಗೇಶ ಹೆಗಡೆ, ‘ಪಶ್ಚಿಮ ಘಟ್ಟ ದೇಶಕ್ಕೆ ಗಂಗಾಧರ ಇದ್ದಂತೆ. ಇಲ್ಲಿ ನೀರು ಶೇಖರಣೆಯಾದರೆ ತೆಲಂಗಾಣ, ಉತ್ತರ ಭಾರತದಲ್ಲಿ ಶುದ್ಧಗಾಳಿ ಸಿಗುತ್ತದೆ. ನದಿ ಜೋಡಣೆಯಾದರೆ ಪಶ್ಚಿಮ ಘಟ್ಟಕ್ಕೆ ಗಂಡಾಂತರ ಎದುರಾಗಬಹುದು’ ಎಂದರು.

ಬಿ.ಎಂ.ಕುಮಾರಸ್ವಾಮಿ, ‘ಮಳೆ ಬೀಳುವ ಪ್ರದೇಶದಲ್ಲಿ ಮಳೆ ನೀರು ಸಂಗ್ರಹಿಸುವ ಕೆಲಸವಾಗಬೇಕು. ಕೆರೆಗಳ ಪುನಶ್ಚೇತನ ಮಾಡಬೇಕು. ಪ್ರಧಾನ ಮಂತ್ರಿ ಮೋದಿಯವರ 'ಕ್ಯಾಚ್ ದಿ ರೇನ್' ತತ್ವ ಪಾಲಿಸಿದರೆ ಸಾಕು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು