ಶುಕ್ರವಾರ, ಸೆಪ್ಟೆಂಬರ್ 24, 2021
27 °C
23 ಸದಸ್ಯ ಬಲದ ಸ್ಥಳೀಯ ಸಂಸ್ಥೆ

ಭಟ್ಕಳ ಪುರಸಭೆಗೆ ಮೇ 29ರಂದು ಚುನಾವಣೆ: ತಂಝೀಮ್ ಬೆಂಬಲಿತರದ್ದೇ ಪ್ರಾಬಲ್ಯ

ರಾಘವೇಂದ್ರ ಭಟ್ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ಎರಡು ತಿಂಗಳಿನಿಂದ ಆಡಳಿತಾಧಿಕಾರಿಯ ಅಧಿಕಾರದಲ್ಲಿ ಇರುವ ಭಟ್ಕಳ ಪುರಸಭೆಗೆ ಮೇ 29ರಂದು ಚುನಾವಣೆ ನಡೆಯಲಿದೆ. ಮೇ 9ರಂದು ಜಿಲ್ಲಾ ಚುನಾವಣಾಧಿಕಾರಿ ಅಧಿಸೂಚನೆ ಹೊರಡಿಸಲಿದ್ದಾರೆ.

ವಿವಿಧ ಪಕ್ಷಗಳ ಮುಖಂಡರು ಇದ್ದರೂ ಭಟ್ಕಳ ಪುರಸಭೆಯ ಆಡಳಿತವನ್ನು ಹಿಂದಿನಿಂದಲೂ ಇಲ್ಲಿನ ಮಜ್ಲಿಸೆ ಇಸ್ಲಾಹ್ ವ ತಂಝೀಮ್ ಸಂಸ್ಥೆ ತನ್ನ ಹಿಡಿದಲ್ಲಿಟ್ಟುಕೊಂಡಿದೆ. ತನ್ನ ಬೆಂಬಲಿತ ಸದಸ್ಯರನ್ನು ಅತಿ ಹೆಚ್ಚು ಅವಿರೋಧವಾಗಿ ಆಯ್ಕೆ ಮಾಡುವ ಪ್ರವೃತ್ತಿಯನ್ನು ತಂಝೀಮ್ ಉಳಿಸಿಕೊಂಡಿದೆ.

ಕಳೆದ ಚುನಾವಣೆಯಲ್ಲಿ ಪುರಸಭೆಯ 23 ಸದಸ್ಯರ ಪೈಕಿ 17 ಸದಸ್ಯರು ತಂಝೀಮ್ ಬೆಂಬಲಿತರಾಗಿದ್ದರು. ನಾಲ್ವರು ಪಕ್ಷೇತರರು, ಒಬ್ಬರು ಕಾಂಗ್ರೆಸ್ ಹಾಗೂ ಒಬ್ಬರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ವಿಶೇಷವೆಂದರೆ ತಂಝೀಮ್ ಬೆಂಬಲಿತ ಎಲ್ಲಾ 17 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಈ ಬಾರಿಯೂ ತಂಝೀಮ್ ಅದನ್ನು ಮುಂದುವರಿಸುವುದಲ್ಲದೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಮೀಸಲಾದರೆ ಮಾತ್ರ ಇತರರು ಆಯ್ಕೆಯಾಗಬಹುದು. ಇಲ್ಲದಿದ್ದಲ್ಲಿ ತಂಝೀಮ್ ಬೆಂಬಲಿತ ಸದಸ್ಯರನ್ನು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದಲ್ಲಿ ಕೂರಿಸುತ್ತದೆ. ಸಂಸ್ಥೆಯು ತೆಗೆದುಕೊಳ್ಳುವ ನಿರ್ಣಯಕ್ಕೆ ಬೆಂಬಲಿತ ಎಲ್ಲಾ ಸದಸ್ಯರ ಒಪ್ಪಿಗೆಯೂ ಇರುತ್ತದೆ.

ಮೀಸಲಾತಿ ವಿವರ

ಒಟ್ಟು 23 ವಾರ್ಡ್‌ಗಳನ್ನು ಹೊಂದಿರುವ ಭಟ್ಕಳ ಪುರಸಭೆಯ ವಿವಿಧ ವಾರ್ಡ್‌ಗಳ ಮೀಸಲಾತಿ ವಿವರ ಈ ರೀತಿ ಇದೆ.

ವಾರ್ಡ್ ಸಂಖ್ಯೆ 1 (ಹಿಂದುಳಿದ ವರ್ಗ ‘ಅ’ – ಮಹಿಳೆ), ವಾರ್ಡ್ 2 (ಸಾಮಾನ್ಯ), ವಾರ್ಡ್ 3 (ಹಿಂದುಳಿದ ವರ್ಗ ‘ಬ’ –  ಮಹಿಳೆ), ವಾರ್ಡ್ 4 (ಸಾಮಾನ್ಯ), ವಾರ್ಡ್ 5 (ಪರಿಶಿಷ್ಟ ಪಂಗಡ), ವಾರ್ಡ್ 6 (ಹಿಂದುಳಿದ ವರ್ಗ ‘ಅ’), ವಾರ್ಡ್ 7 (ಸಾಮಾನ್ಯ ಮಹಿಳೆ), ವಾರ್ಡ್ 8 (ಹಿಂದುಳಿದ ವರ್ಗ ‘ಬ’), ವಾರ್ಡ್ 9 (ಹಿಂದುಳಿದ ವರ್ಗ ‘ಅ’), ವಾರ್ಡ್ 10 (ಸಾಮಾನ್ಯ ಮಹಿಳೆ).

ವಾರ್ಡ್ 11 (ಸಾಮಾನ್ಯ), ವಾರ್ಡ್ 12 ( ಹಿಂದುಳಿದ ವರ್ಗ ‘ಅ’), ವಾರ್ಡ್ 13 (ಸಾಮಾನ್ಯ ಮಹಿಳೆ), ವಾರ್ಡ್ 14 (ಹಿಂದುಳಿದ ವರ್ಗ ‘ಅ’ – ಮಹಿಳೆ), ವಾರ್ಡ್ 15 (ಸಾಮಾನ್ಯ), ವಾರ್ಡ್ 16 (ಸಾಮಾನ್ಯ), ವಾರ್ಡ್ 17 (ಹಿಂದುಳಿದ ವರ್ಗ ‘ಅ’), ವಾರ್ಡ್ 18 (ಸಾಮಾನ್ಯ ಮಹಿಳೆ), ವಾರ್ಡ್ 19 (ಪರಿಶಿಷ್ಟ ಜಾತಿ), ವಾರ್ಡ್ 20 (ಸಾಮಾನ್ಯ), ವಾರ್ಡ್ 21 (ಸಾಮಾನ್ಯ ಮಹಿಳೆ), ವಾರ್ಡ್ 22 (ಸಾಮಾನ್ಯ ಮಹಿಳೆ), ವಾರ್ಡ್ 23 (ಸಾಮಾನ್ಯ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು