ಶನಿವಾರ, ಮೇ 21, 2022
27 °C

ಶಿರಸಿ: ತಂತಿಬೇಲಿಗೆ ಸಿಲುಕಿ ಕಪ್ಪು ಚಿರತೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಶಿರಸಿ: ತಾಲ್ಲೂಕಿನ ಬೆಂಗಳೆ ಗ್ರಾಮದ ಮಂಟಕಾಲ ರಸ್ತೆ ಬಳಿ ಕಾಡುಪ್ರಾಣಿ ಸೆರೆಗೆ ಹಾಕಿದ್ದ ಉರುಳಿಗೆ ಶುಕ್ರವಾರ ಕಪ್ಪು ಚಿರತೆಯೊಂದು ಸಿಲುಕಿ ಮೃತಪಟ್ಟಿದೆ.

ಇದು 4 ವರ್ಷದ ಹೆಣ್ಣು ಕಪ್ಪು ಚಿರತೆಯಾಗಿದ್ದು, ಉರುಳು ತಂತಿಯಿಂದ ಸೊಂಟದ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಮೃತಪಟ್ಟಿದೆ. ಬನವಾಸಿ ಅರಣ್ಯ ವ್ಯಾಪ್ತಿಯಲ್ಲಿ ಪತ್ತೆಯಾದ ಮೊದಲ ಕಪ್ಪು ಚಿರತೆ ಇದಾಗಿದೆ.

ನಸುಕಿನ ಜಾವ ಕಪ್ಪು ಚಿರತೆಯು ಬೇಲಿಗೆ ಸಿಲುಕಿ ಒದ್ದಾಡುವುದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರು.

'ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯುವ ಪ್ರಯತ್ನ ನಡೆಯಿತು. ಜನ ಜಂಗುಳಿಯೂ ಹೆಚ್ಚಿತ್ತು. ಹೀಗಾಗಿ ಚಿರತೆ ಭಯದಿಂದಲೂ ಮೃತಪಟ್ಟಿರಬಹುದು' ಎಂದು ಆರ್.ಎಫ್.ಓ. ಉಷಾ ಕಬ್ಬೇರ ತಿಳಿಸಿದರು.

'ಪ್ರಾಣಿ ಹಿಡಿಯಲು ಉರುಳು ಹಾಕಿದವರ ಪತ್ತೆಗೆ ಮುಂದಾಗಿದ್ದೇವೆ' ಎಂದು ತಿಳಿಸಿದರು.

ಪಶು ವೈದ್ಯಾಧಿಕಾರಿ ಡಾ.ದಿನೇಶ ಕೆ.ಎನ್. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಲಯ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು