ಶಿರಸಿ: ಜಿಲ್ಲೆಯಲ್ಲಿ ದೂರವಾಣಿ ಹಾಗೂ ಅಂತರ್ಜಾಲ ವ್ಯವಸ್ಥೆ ತೀರಾ ಹದಗೆಟ್ಟಿರುವುದರಿಂದ ಸಾರ್ವಜನಿಕರು ತೊಂದರೆಗೆ ಒಳಗಾಗಿದ್ದಾರೆ. ವರ್ಕ್ ಫ್ರಾಮ್ ಹೋಮ್ ಉದ್ಯೋಗಿಗಳು, ಆನ್‌ಲೈನ್ ಮೂಲಕ ಪಾಠ ಕೇಳುವ ವಿದ್ಯಾರ್ಥಿಗಳು ದಿನನಿತ್ಯ ಎದುರಿಸುವ ಸಮಸ್ಯೆಗಳನ್ನು ಬಿಎಸ್‌ಎನ್‌ಎಲ್ ತಕ್ಷಣ ಪರಿಹರಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ದೀಪಕ ದೊಡ್ಡೂರು ಆಗ್ರಹಿಸಿದ್ದಾರೆ.

ಮಳೆಗಾಲ ಪೂರ್ವದಲ್ಲೇ ಬಿಎಸ್‌ಎನ್‌ಎಲ್ ವ್ಯವಸ್ಥೆ ಹದಗೆಟ್ಟಿತ್ತು. ಈಗ ಮಳೆ–ಗಾಳಿಯಿಂದ ಸಂಪರ್ಕ ಇನ್ನಷ್ಟು ಕುಸಿದಿದೆ. ಈ ಸಂದರ್ಭದಲ್ಲಿ ಸಂಸ್ಥೆಗೆ ಮಾರ್ಗದರ್ಶನ ನೀಡಬೇಕಾದ ಸಮಯೋಚಿತ ಜವಾಬ್ದಾರಿಯನ್ನು ಸಂಸದರು ನಿರ್ವಹಿಸಬೇಕಿತ್ತು. ಅದರ ಬದಲಾಗಿ ಅವರು ಸಂಸ್ಥೆಗೆ ಬೈಯುತ್ತ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಗ್ರಾಮೀಣ ಜನರು ಸ್ವಂತ ವೆಚ್ಚದಲ್ಲಿ ಆಪ್ಟಿಕಲ್ ಕೇಬಲ್ ಸಂಪರ್ಕ ಪಡೆಯುತ್ತಿದ್ದಾರೆ. ಇದು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಹೊಣೆ ಯಾರಾಗುತ್ತಾರೆ? ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಈ ಸಂಬಂಧ ಸಾರ್ವಜನಿಕರ ಸಭೆ ಕರೆಯಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.