ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರ ಖಾತೆಗೆ ಹಣ: ಅನುಕೂಲ’

Last Updated 1 ಫೆಬ್ರುವರಿ 2019, 20:18 IST
ಅಕ್ಷರ ಗಾತ್ರ

ಶಿರಸಿ: ರೈತರ ಖಾತೆಗೆ ₹ 6000 ಹಾಕುವ ಕೇಂದ್ರ ಸರ್ಕಾರದ ಪ್ರಸ್ತಾವ ಸಣ್ಣ ರೈತರಿಗೆ ಅನುಕೂಲವಾಗಿದೆ. ಆದರೆ, ಈ ರೀತಿ ಹಣ ನೀಡುವುದಕ್ಕಿಂತ ರೈತರು ಬೆಳೆದ ಬೆಳೆಗೆ ಒಳ್ಳೆಯ ಬೆಲೆ ನಿಗದಿಪಡಿಸಿದರೆ ಹೆಚ್ಚು ಅನುಕೂಲ. ಇದರಿಂದ ರೈತರು ಅವರ ಕುಟುಂಬದ ವಾರ್ಷಿಕ ಬಜೆಟ್ ಸಿದ್ಧಪಡಿಸಿಕೊಳ್ಳಲು ಸಹಾಯವಾಗುತ್ತದೆ.

–ಶ್ರೀಪಾದ ಹೆಗಡೆ ಗುಮ್ಮನಮನೆ, ಕೃಷಿಕ

**

‘ಮಧ್ಯಮ ವರ್ಗ ಖುಷಿಪಡಿಸುವ ಬಜೆಟ್’

ಇದು ಚುನಾವಣಾ ಬಜೆಟ್. ರೈತರು, ಆದಾಯ ತೆರಿಗೆದಾರರು, ಮಧ್ಯಮ ವರ್ಗದವರನ್ನು ಚುನಾವಣೆಗಾಗಿ ಖುಷಿ ಪಡಿಸುವ ಬಜೆಟ್ ಇದಾಗಿದೆ. ಈ ಬಜೆಟ್‌ನಲ್ಲಿ ಕಾರ್ಮಿಕರ ಪಿಂಚಣಿ ಯೋಜನೆ ಬಿಟ್ಟರೆ, ಸುಕನ್ಯಾ ಸಮೃದ್ಧಿಯಂತಹ ಇನ್ನಾವುದೇ ವಿಶೇಷ ಯೋಜನೆ ಈ ಬಜೆಟ್‌ನಲ್ಲಿ ಘೋಷಣೆಯಾಗಿಲ್ಲ.

– ಡಾ. ರವಿಕಿರಣ ಪಟವರ್ಧನ ಶಿರಸಿ, ಆಯುರ್ವೇದ ವೈದ್ಯ

**

‘ದಿಟ್ಟ ಹೆಜ್ಜೆ ಬಜೆಟ್‌ನಲ್ಲಿ ಇಲ್ಲ’

ಜನರು ಬಹಳಷ್ಟು ಕೊಡುಗೆ ನಿರೀಕ್ಷೆ ಮಾಡಿದ್ದರು. ಆದರೆ, ಈ ನಿರೀಕ್ಷೆ ಹುಸಿಯಾಗಿದೆ. ಮಧ್ಯಮ ವರ್ಗವನ್ನು ಒಲಿಸಲು ಆದಾಯ ತೆರಿಗೆ ಮಿತಿ ಹೆಚ್ಚಳ ಮಾಡಿದ್ದು, ಹಣದುಬ್ಬರದ ಸಂದರ್ಭದಲ್ಲಿ ಪ್ರಸ್ತುತ. ಸರ್ಕಾರ ರೈತರಿಗೆ ಹಣ ಕೊಡುವ ಕ್ರಮವೇ ಸರಿಯಲ್ಲ, ಇದು ರೈತರ ಮೂಗಿಗೆ ತುಪ್ಪ ಸವರುವ ನಿರ್ಧಾರ. ಒಣ ಭೂಮಿಯಲ್ಲಿ 10 ಎಕರೆ ಜಮೀನು ಇದ್ದರೂ ಬೆಳೆ ಇರುವುದಿಲ್ಲ. ರೈತರನ್ನು ಮೇಲೆತ್ತುವ ನಿರ್ಧಾರ ಆಗಬೇಕಿತ್ತು. ದೇಶದ ಸಂಪನ್ಮೂಲ ಕ್ರೋಡೀಕರಣ ತಡೆಗಟ್ಟುವ ಯಾವ ದಿಟ್ಟ ಹೆಜ್ಜೆಯೂ ಬಜೆಟ್‌ನಲ್ಲಿ ಇಲ್ಲ.

– ಗಣೇಶ ಭಟ್ಟ ಉಪ್ಪೋಣಿ ಶಿರಸಿ, ಉದ್ಯಮಿ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT