ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರಕ್ಕಾಗಿ ಕಪ್ಪೆಯನ್ನೇ ನುಂಗಿದ ಕಪ್ಪೆ!

ಕಾರವಾರದ ಕಡವಾಡ ಸಮೀಪದ ಹಳೆಕೋಟೆಯ ವಿದ್ಯಮಾನ
Last Updated 7 ಸೆಪ್ಟೆಂಬರ್ 2020, 12:36 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಕಡವಾಡ ಸಮೀಪದ ಹಳೆಕೋಟೆ ಎಂಬಲ್ಲಿ ‘ಗೊಂಕರ ಕಪ್ಪೆ’ಯೊಂದು (ಇಂಡಿಯನ್ ಬುಲ್‌ಫ್ರಾಗ್) ಮರಕಪ್ಪೆಯನ್ನು (ಟ್ರೀ ಫ್ರಾಗ್) ಬೇಟೆಯಾಡಿ ನುಂಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೆಲವು ದಿನಗಳ ಹಿಂದೆ ನಡೆದ ಈ ದೃಶ್ಯವನ್ನು ಸ್ಥಳೀಯ ನಿವಾಸಿ ಅಜಯ್ ಎಂಬುವವರು ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಕಪ್ಪೆಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ಶಿರಸಿಯ ಅಮಿತ್ ಹೆಗಡೆ ಮಾಹಿತಿ ನೀಡಿ, ‘ಕಾಳಿಂಗ ಸರ್ಪವು ಕೇರೆ ಹಾವನ್ನು ಬೇಟೆಯಾಡುವ ರೀತಿಯಲ್ಲಿ ಗೋಂಕರ ಕಪ್ಪೆಯು ಸಣ್ಣ ಕಪ್ಪೆಗಳನ್ನು ಬೇಟೆಯಾಡುತ್ತದೆ. ಕಪ್ಪೆಗಳು ತಮ್ಮೆದುರು ಬರುವ ಸಣ್ಣ ಜೀವಿಗಳನ್ನೆಲ್ಲ ಹಿಡಿದು ನುಂಗುತ್ತವೆ. ಇದು ಸಹಜ ಪ್ರಕ್ರಿಯೆ’ ಎಂದು ವಿವರಿಸಿದರು.

‘ಮೊಟ್ಟೆಯಿಂದ ಹೊರ ಬಂದ ಕೂಡಲೇ ಲಾರ್ವಾ ಮಾದರಿಯಲ್ಲಿ ಇರುವಾಗಲೇ ಅವು ಇತರ ಲಾರ್ವಾಗಳನ್ನು ತಿನ್ನುತ್ತವೆ. ಕ‍ಪ್ಪೆಗಳಿಗೆ ಏನೇ ತಿಂದರೂ ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿದೆ. ಇದು ನಿಸರ್ಗದಲ್ಲಿ ಒಂದರ ಸಂಖ್ಯೆ ಹೆಚ್ಚಾದರೆ ಅದನ್ನು ನಿಯಂತ್ರಿಸಲು ಇರುವ ನೈಸರ್ಗಿಕ ಮಾರ್ಗ’ ಎಂದು ಹೇಳಿದರು.

‘ಗೋಂಕರ ಕಪ್ಪೆಗಳು ಸುಮಾರು ಏಳು ಕೆ.ಜಿ ತೂಕದವರೆಗೂ ಬೆಳೆಯುತ್ತವೆ. ಉತ್ತರ ಕನ್ನಡವೂ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಕಾಣಸಿಗುವ ಈ ಪ್ರಭೇದದ ಕಪ್ಪೆಗಳು, ಎಲ್ಲ ರೀತಿಯ ವಾತಾವರಣದಲ್ಲಿ ಜೀವಿಸುತ್ತವೆ. ಈಚಿನ ವರ್ಷಗಳಲ್ಲಿ ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲೂ ಕಾಣಿಸುತ್ತಿವೆ. ಅಲ್ಲಿನ ಸ್ಥಳೀಯ ಪ್ರಭೇದಗಳ ಕಪ್ಪೆಗಳನ್ನು ಬೇಟೆಯಾಡುತ್ತಿರುವ ಬಗ್ಗೆ ದಾಖಲಾಗಿವೆ’ ಎಂದು ತಿಳಿಸಿದರು.

‘ಈ ಮೊದಲಿನಿಂದಲೂ ಇಂತಹ ಸಂಗತಿಗಳಿದ್ದರೂ ದಾಖಲಾಗುತ್ತಿರಲಿಲ್ಲ. ಈಗ ಮೊಬೈಲ್ ಫೋನ್‌, ಡಿಜಿಟಲ್ ಕ್ಯಾಮೆರಾ, ಸಾಮಾಜಿಕ ಜಾಲತಾಣಗಳು ಸುಲಭವಾಗಿ ಸಿಗುವ ಕಾರಣ ಇಂತಹ ಮಾಹಿತಿಗಳು ಹೆಚ್ಚು ಪ್ರಚಾರಕ್ಕೆ ಬರುತ್ತಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT