ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಶಾಪಿಂಗ್ ಮಾಡಿದ ಉದ್ಯಮಿಗೆ ವಂಚನೆ

Last Updated 6 ಜೂನ್ 2020, 15:35 IST
ಅಕ್ಷರ ಗಾತ್ರ

ಕಾರವಾರ: ತ್ಯಾಜ್ಯ ವಿಲೇವಾರಿ ಚೀಲವನ್ನು ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನಿಂದ ತರಿಸಿಕೊಂಡಚೆಂಡಿಯಾದ ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯಿಂದ ವಂಚಕರು₹ 74 ಸಾವಿರ ಲಪಟಾಯಿಸಿದ್ದಾರೆ.

ಹಾರ್ಡ್‌ವೇರ್ ಉದ್ಯಮಿ ಆರ್.ಟಿ.ರಂಗಸ್ವಾಮಿ ಎಂಬುವವರು ಈ ಸಂಬಂಧನಗರದ ಸಿ.ಇ.ಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನವರು ಕಳುಹಿಸಿದ ಯು.ಆರ್.ಎಲ್ ಕೊಂಡಿಯ ಮೂಲಕ ಅವರು, ತಮ್ಮ ಎ.ಟಿ.ಎಂ ಕಾರ್ಡ್ ಮಾಹಿತಿ ನಮೂದಿಸಿ ಹಣ ‍ಪಾವತಿಸಿದ್ದರು.ಬಳಿಕ ಅವರ ಮೊಬೈಲ್ ಫೋನ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ಶಾಪಿಂಗ್ ವೆಬ್‌ಸೈಟ್‌ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದ.

ತಮಗೆ ಕಾರು ಬಹುಮಾನವಾಗಿ ಬಂದಿದ್ದು, ಅದಕ್ಕೆ ತೆರಿಗೆ ಪಾವತಿಸಬೇಕು ಎಂದು ಆತ ಹೇಳಿದ್ದ. ಆದರೆ, ರಂಗಸ್ವಾಮಿ ಅದನ್ನು ನಿರಾಕರಿಸಿದ್ದರು. ಬಳಿಕ ಅವರ ಬ್ಯಾಂಕ್ ಖಾತೆಯಿಂದ ಏ.29ರಿಂದ ಜೂನ್ 4ರವರೆಗೆ ಹಂತಹಂತವಾಗಿ ಹಣ ಕಡಿತವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT