ಶಿರಸಿ: ಸಚಿವ ಸಂಪುಟ ವಿಸ್ತರಣೆ ನಿರಂತರ ಪ್ರಕ್ರಿಯೆ. ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಡುವವರಿಗೆ ಮುಖ್ಯಮಂತ್ರಿ ಖಾತೆ ನೀಡಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, 'ಸಕ್ಕರೆ ಖಾತೆ ಹಿಂಪಡೆದಿದ್ದಕ್ಕೆ ಬೇಸರವಿಲ್ಲ. ಖಾತೆ ನೀಡುವುದು, ಹಿಂಪಡೆಯುವುದು ಮುಖ್ಯಮಂತ್ರಿ ವಿವೇಚನಕ್ಕೆ ಬಿಟ್ಟ ವಿಚಾರ.ಅವರಿಗೆ ಪರಮಾಧಿಕಾರವಿದೆ' ಎಂದರು.

'ಸಂಪುಟದಲ್ಲಿರುವ ಯಾವ ಸಚಿವರಿಗೂ ಅಸಮಾಧಾನವಿಲ್ಲ. ಸಚಿವ ಸ್ಥಾನ ಸಿಗದಿದ್ದವರಲ್ಲೂ ಬೇಸರವಿಲ್ಲ' ಎಂದರು.

'ಪಕ್ಷದ ಹೈಕಮಾಂಡ್ ಎಲ್ಲವನ್ನೂ ನಿಭಾಯಿಸುತ್ತದೆ. ಮುಖ್ಯಮಂತ್ರಿ ಜತೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ' ಎಂದರು.

'ಕದಂಬೋತ್ಸವ, ಜಾತ್ರೆಗಳನ್ನೆಲ್ಲ ಸದ್ಯ ನಡೆಸುವ ಯೋಚನೆ ಸದ್ಯಕ್ಕಿಲ್ಲ. ಜನರ ಆರೋಗ್ಯ ಕಾಪಾಡುವುದು ಈಗಿನ ಆದ್ಯತೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.