ಶನಿವಾರ, ಮಾರ್ಚ್ 6, 2021
32 °C
ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಯೇಸುಕ್ರಿಸ್ತನ ಗುಣಗಾನ

ಭಕ್ತಿಯಿಂದ ಕ್ರಿಸ್‌ಮಸ್ ಹಬ್ಬದ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕ್ರಿಸ್‌ಮಸ್ ಹಬ್ಬವನ್ನು ಜಿಲ್ಲೆಯಲ್ಲಿ ಶುಕ್ರವಾರ ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು. ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಗೋದಲಿಗಳನ್ನು ರಚಿಸಿ ಯೇಸುಕ್ರಿಸ್ತನ ಗುಣಗಾನ ಮಾಡಲಾಯಿತು.

ಈ ಬಾರಿ ಕೊರೊನಾ ಕಾರಣದಿಂದ, ಕ್ರಿಸ್‌ಮಸ್ ಹಬ್ಬವು ಕಳೆದ ವರ್ಷದಂತೆ ಸಂಭ್ರಮವಿರಲಿಲ್ಲ. ಚರ್ಚ್‌ಗಳಲ್ಲಿ ಪ್ರಾರ್ಥನೆಗೆ ಹೆಚ್ಚಿನ ಜನ ಭಾಗವಹಿಸದೇ ತಮ್ಮ ಮನೆಗಳಲ್ಲೇ ನೆರವೇರಿಸಿದರು. ಚರ್ಚ್‌ಗೆ ಬಂದವರಿಗೆ ಥರ್ಮಲ್ ಸ್ಯ್ಕಾನರ್ ಮೂಲಕ ದೇಹದ ಉಷ್ಣಾಂಶ ಪರೀಕ್ಷಿಸಲಾಯಿತು. ಮುಖಗವಸು ಧರಿಸುವುದು ಮತ್ತು ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿತ್ತು.

ಮನೆಗಳಲ್ಲಿ ಕ್ರಿಸ್‌ಮಸ್ ಪ್ರಯುಕ್ತ ವಿಶೇಷ ಖಾದ್ಯಗಳನ್ನು ತಯಾರಿಸಲಾಗಿತ್ತು. ಚಕ್ಕುಲಿ, ವಡಾ, ಪೂರಿ, ತೆಂಗಿನಕಾಯಿ ಬರ್ಫಿ, ಡೇಟ್‌ವಾಲ್ ನೆಟ್‌ಕೇಕ್, ಕ್ರಿಸ್‌ಮಸ್ ಫ್ರುಟ್‌ಕೇಕ್, ಅಲ್ಮಂಡ್ ಕೇಕ್, ನೇವರಿ ಮುಂತಾದ ತಿನಿಸುಗಳನ್ನು ಮಾಡಲಾಗಿತ್ತು. ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ, ಸಿಹಿ ಹಂಚಿಕೊಂಡು ಶುಭಾಶಯ ಕೋರಿದರು. ಹೈ ಚರ್ಚ್ ಮತ್ತು ಡೌನ್‌ ಚರ್ಚ್ ಸೇರಿದಂತೆ ಎಲ್ಲ ಚರ್ಚ್‌ಗಳಿಗೆ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಬೃಹತ್ ನಕ್ಷತ್ರಾಕಾರದ ತೂಗುದೀಪಗಳು ಆಕರ್ಷಿಸಿದವು.

ಭಟ್ಕಳದ ಪುರವರ್ಗದ ಸಂತ ಜೋಸೆಫ್ ಚರ್ಚ್‌ನಲ್ಲಿ ಯೇಸುಕ್ರಿಸ್ತನ ಜನ್ಮ ವಿವರಣೆ ನೀಡುವ ಸ್ತಬ್ಧಚಿತ್ರ ಗಮನ ಸೆಳೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು