ಶುಕ್ರವಾರ, ಆಗಸ್ಟ್ 23, 2019
21 °C

ತಡೆಗೋಡೆಗೆ ₹ 1 ಕೋಟಿ ಬಿಡುಗಡೆ: ಸಿ.ಎಂ. ಆದೇಶ

Published:
Updated:
Prajavani

ಕಾರವಾರ: ದೇವಬಾಗ ಅಂಬಿಗವಾಡ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲು ತಕ್ಷಣವೇ ₹ 1 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಂದರು ಇಲಾಖೆಗೆ ಶನಿವಾರ ಆದೇಶಿಸಿದ್ದಾರೆ.

ಕಡಲ್ಕೊರೆತದಿಂದ ಭೂಪ್ರದೇಶ ಸಮುದ್ರ ಪಾಲಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ, ಆ.3ರಂದು ಮುಖ್ಯಮಂತ್ರಿಗೆ ಬೆಂಗಳೂರಿನಲ್ಲಿ ನೀಡಿದ ಮನವಿಯಲ್ಲಿ ತಿಳಿಸಿದ್ದರು. ಸುಮಾರು 120 ಮೀಟರ್ ಉದ್ದದ ಹಳೆಯ ತಡೆಗೋಡೆಯ ದುರಸ್ತಿ ಮತ್ತು ಮರು ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆಯೂ ಕೋರಿದ್ದರು.

Post Comments (+)