ಶನಿವಾರ, ಆಗಸ್ಟ್ 24, 2019
27 °C

ನಾಗರ ಪಂಚಮಿಗೆ ಕಾರಿನಲ್ಲಿ ಪ್ರತ್ಯಕ್ಷನಾದ ನಾಗ !

Published:
Updated:

ಶಿರಸಿ: ಇಲ್ಲಿನ ಹುಲೇಕಲ್ ರಸ್ತೆಯ ಯುವ‌ ಮೋಟರ್ಸ್‌ ಗ್ಯಾರೇಜಿಗೆ ವ್ಯಾಗನಾರ್ ಕಾರನ್ನು ಮಾಲೀಕರು ಸರ್ವೀಸ್ ಮಾಡಿಸಿಕೊಂಡು ಹೋಗಲು ಸೋಮವಾರ ಮಧ್ಯಾಹ್ನ ತಂದಿದ್ದರು. ಕಾರು ತೊಳೆಯಲು ಹೊರಟ ಹುಡುಗ ಬಾನೆಟ್ ತೆಗೆಯುತ್ತಿದ್ದಂತೆ ಒಮ್ಮೆಲೇ ಬೆಚ್ಚಿದ. ಬ್ಯಾಟರಿಯ ಮೇಲೆ ಹಾವೊಂದು ಹೆಡೆ ಬಿಚ್ಚಿ ಕುಳಿತಿತ್ತು.

ಗ್ಯಾರೇಜ್ ಮಾಲೀಕರು ಉರಗ ತಜ್ಞ ಪ್ರಶಾಂತ ಹುಲೇಕಲ್ ಅವರಿಗೆ ವಿಷಯ ತಿಳಿಸಿದರು. ತಕ್ಷಣ ಸ್ಥಳಕ್ಕೆ ಬಂದ ಪ್ರಶಾಂತ್, ಹೆಡೆಯೆತ್ತಿ ಕುಳಿತಿದ್ದ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟರು. ನಾಗರ ಪಂಚಮಿಯಂದೇ ಹಾವನ್ನು ಕಂಡ ಜನರು ಭಾವಪರವಶರಾಗಿ, ಅದಕ್ಕೆ ನಮಿಸಿದರು.

Post Comments (+)