ಭಾನುವಾರ, ಸೆಪ್ಟೆಂಬರ್ 25, 2022
21 °C

ಶಿರಸಿ:ರಸ್ತೆ ಗುಂಡಿ ಮುಚ್ಚಿದ ನಗರಸಭೆ ಸದಸ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಮಳೆಯಿಂದಾಗಿ ಇಲ್ಲಿನ ವಾರ್ಡ್ ನಂ.25ರ ಹಲವೆಡೆ ರಸ್ತೆಗೆ ಬಿದ್ದಿದ್ದ ಹೊಂಡಗಳನ್ನು ವಾರ್ಡ್ ಸದಸ್ಯ ನಾಗರಾಜ ನಾಯ್ಕ ಅವರೇ ಮುಚ್ಚಿದ್ದಾರೆ.

ವಾರ್ಡ್ ವ್ಯಾಪ್ತಿಯ ಗಾಂಧಿ ನಗರ, ರಾಯರಪೇಟೆ ಭಾಗದಲ್ಲಿ ಸತತ ಮಳೆಗೆ ರಸ್ತೆಗಳು ಹಾಳಾಗಿವೆ. ಬೃಹತ್ ಗಾತ್ರದ ಹೊಂಡಗಳಿಂದ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಇದನ್ನು ಅರಿತ ಸದಸ್ಯ ನಾಗರಾಜ ತಾತ್ಕಾಲಿಕ ದುರಸ್ತಿ ಕಾರ್ಯವನ್ನು ಕೈಗೊಂಡರು. ಜಲ್ಲಿ, ಮಣ್ಣು, ಸಿಮೆಂಟ್ ಬಳಸಿ ಹೊಂಡಗಳನ್ನು ಭರ್ತಿ ಮಾಡಿದರು.

ಕೆಲವು ದಿನಗಳ ಹಿಂದೆ ಸುರಿದಿದ್ದ ಭಾರಿ ಮಳೆಗೆ ಇದೇ ವಾರ್ಡ್ ವ್ಯಾಪ್ತಿಯ ಹಾಲೊಂಡ ಬಡಾವಣೆಯಲ್ಲಿ ಧರೆ ಕುಸಿತ ಉಂಟಾಗುವ ಹಂತದಲ್ಲಿದ್ದಾಗ ಅದನ್ನು ತಡೆಯಲು ಚರಂಡಿ ನಿರ್ಮಿಸುವ ವೇಳೆ ಸ್ವತಃ ಕಾರ್ಯಾಚರಣೆಗೆ ಇಳಿದಿದ್ದರು.

‘ಜನರ ದೂರಿಗೆ ಸ್ಪಂದಿಸಿದ ಸಂತೃಪ್ತಿ ಇದೆ. ಮಳೆ ಇಳಿಮುಖವಾದ ನಂತರ ರಸ್ತೆಗಳನ್ನು ಸರಿಪಡಿಸಲು ನಗರಸಭೆಯಿಂದ ಕ್ರಮವಹಿಸಲಾಗುವುದು. ಸಣ್ಣಪುಟ್ಟ ಕೆಲಸಕ್ಕೂ ಅಧಿಕಾರಿಗಳಿಗೆ ತಿಳಿಸುವ ಬದಲು ಕೈಲಾದಷ್ಟು ಮಟ್ಟಿಗೆ ಕೆಲಸ ಮಾಡಿದ್ದೇನೆ’ ಎಂದು ನಾಗರಾಜ ನಾಯ್ಕ ಪ್ರತಿಕ್ರಿಯಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು