ಶನಿವಾರ, ಜೂನ್ 19, 2021
26 °C
ಉದ್ಯೋಗದಲ್ಲಿ ಇರುವವರು ಗುರುತಿನ ಚೀಟಿ ತೋರಿಸಬೇಕು..

ಗೋವಾ ಪ್ರವೇಶಕ್ಕೆ ‘ನೆಗೆಟಿವ್’ ಪ್ರಮಾಣಪತ್ರ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಗೋವಾ ಪ್ರವೇಶಿಸುವ ಪ್ರತಿಯೊಬ್ಬರೂ 72 ಗಂಟೆಗಳ ಮೊದಲು ಪಡೆದ ಕೋವಿಡ್ ನೆಗೆಟಿವ್ (ಆರ್.ಟಿ.ಪಿ.ಸಿ.ಆರ್) ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ. ಮೇ 12ರಿಂದ ಈ ಆದೇಶ ಜಾರಿಯಾಗಲಿದೆ.

ಈ ಸಂಬಂಧ ದಕ್ಷಿಣ ಗೋವಾ ಮತ್ತು ಉತ್ತರ ಗೋವಾ ಜಿಲ್ಲಾಧಿಕಾರಿಗಳು ಮಂಗಳವಾರ ಆದೇಶ ಪ್ರಕಟಿಸಿದ್ದಾರೆ. ಕಾರವಾರ ತಾಲ್ಲೂಕಿನ ಮಾಜಾಳಿ ಮತ್ತು ಜೊಯಿಡಾದ ಅನಮೋಡ ಮೂಲಕ ಗೋವಾಕ್ಕೆ ಹೋಗುವವರ ಮೇಲೆ ಈ ಆದೇಶದಿಂದ ಹೆಚ್ಚಿನ ಪರಿಣಾಮ ಬೀರಲಿದೆ.

ಇವರಿಗೆ ವಿನಾಯಿತಿ: ಅಲ್ಲಿ ಉದ್ಯೋಗದಲ್ಲಿರುವವರು ಉದ್ಯೋಗದಾತ ಸಂಸ್ಥೆಯು ನೀಡಿದ ಗುರುತಿನ ಚೀಟಿ ಅಥವಾ ಸಂಸ್ಥೆಯಿಂದ ನೀಡಿದ ಪತ್ರವನ್ನು ತೋರಿಸಿ ಹೋಗಬಹುದು. ಉಳಿದಂತೆ, ಗೋವಾ ನಿವಾಸಿಗಳು ತಮ್ಮ ವಾಸ್ತವ್ಯಕ್ಕೆ ಕುರಿತಾದ ದಾಖಲೆಗಳನ್ನು ತೋರಿಸಬೇಕು.

ವೈದ್ಯಕೀಯ ಕಾರಣಗಳಿಂದ ಗೋವಾಕ್ಕೆ ಭೇಟಿ ಕೊಡುವವರು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರಬೇಕು. ಆಂಬುಲೆನ್ಸ್‌ನಲ್ಲಿ ರೋಗಿಗಳು ಬಂದರೆ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು