ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಹಣಕಾಸು ಸಚಿವರಿಗೆ ದೇಶಪಾಂಡೆ ಪತ್ರ

Last Updated 17 ಅಕ್ಟೋಬರ್ 2019, 4:39 IST
ಅಕ್ಷರ ಗಾತ್ರ

ಶಿರಸಿ: ದೇಶದ ಆರ್ಥಿಕ ಬೆನ್ನೆಲುಬಾಗಿರುವ ಮಧ್ಯಮ, ಸಣ್ಣ, ಸೂಕ್ಷ್ಮ ಕೈಗಾರಿಕೆಗಳ ಬೆಳವಣಿಗೆ ಹಾಗೂ ಅದಕ್ಕೆ ಪ್ರೋತ್ಸಾಹ ಇಂದಿನ ಅಗತ್ಯವಾಗಿದೆ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅವರು ಕೇಂದ್ರ ಹಣಕಾಸು ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಸ್ತುತ ಚಾಲ್ತಿಯಲ್ಲಿರುವ ಹಾಗೂ ಹೊಸದಾದ ನಿಗದಿತ ಅವಧಿಯ ಸಾಲದ ಅವಧಿಯನ್ನು 15 ವರ್ಷಗಳಿಗೆ ನಿಗದಿಪಡಿಸಿ, ಪ್ರಸ್ತುತ ಅವಧಿಯ ಸಾಲದ ಉಳಿದ ಮೊತ್ತವನ್ನು 15 ವರ್ಷಗಳ ಅವಧಿಗೆ ಪರಿವರ್ತಿಸಲು ಬ್ಯಾಂಕುಗಳಿಗೆ ಸೂಚಿಸಬೇಕು. ಉದ್ಯಮಿಗಳ ಭೂಮಿ ಮತ್ತು ಕಟ್ಟಡವನ್ನು ಮೌಲ್ಯೀಕರಿಸಿ, ಇದರ ಶೇಕಡಾವಾರು ಮೊತ್ತವನ್ನು ಮೇಲಾಧಾರ ಖಾತರಿಯೊಂದಿಗೆ ಕಾರ್ಯ ಬಂಡವಾಳವನ್ನಾಗಿ ನೀಡಬಹುದು.

ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಯಂತ್ರೋಪಕರಣಗಳಿಗೆ ನೀಡುವ ಸಾಲದ ನೀತಿ ಬದಲಾಗಬೇಕು, ಭೂಮಿ ಮತ್ತು ಕಟ್ಟಡವನ್ನು ದುಡಿಯುವ ಬಂಡವಾಳವಾಗಿ ಪರಿಗಣಿಸಬಾರದು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT