ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮನ ಸೆಳೆಯುವ ‘ಧರ್ಮಾ’ ಸೊಬಗು

Last Updated 13 ಆಗಸ್ಟ್ 2020, 16:05 IST
ಅಕ್ಷರ ಗಾತ್ರ

ಮುಂಡಗೋಡ: ಮೂರು ತಾಲ್ಲೂಕುಗಳೊಂದಿಗೆ ಜಲಾನಯನ ಪ್ರದೇಶ ಹಂಚಿಕೊಂಡಿರುವ ತಾಲ್ಲೂಕಿನ ಮಳಗಿ ಸಮೀ‍ಪದ ಧರ್ಮಾ ಜಲಾಶಯ ಭರ್ತಿಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಕೋಡಿ ಬಿದ್ದು ಹಾನಗಲ್ ತಾಲ್ಲೂಕಿನ ಗದ್ದೆಗಳಿಗೆ ಹರಿಯುತ್ತಿದೆ.

ರೈತರು ಕೋಡಿ ಬೀಳುತ್ತಿರುವ ದೃಶ್ಯವನ್ನು ಕಣ್ತುಂಬಿಕೊಂಡು, ಗಂಗೆಗೆ ಪೂಜೆ ಸಲ್ಲಿಸುತ್ತಿದ್ದಾರೆ. ತಾಲ್ಲೂಕಿನಲ್ಲಿಯೇ ಮೊದಲು ತುಂಬುವ ಜಲಾಶಯ ಎಂಬ ಹೆಗ್ಗಳಿಕೆ ಹೊಂದಿದೆ. ಈಚಿನ ವರ್ಷಗಳಲ್ಲಿ ಇದು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿರುವ ಜಲಾಶಯ ಆಗಿದೆ.

ಶಿರಸಿ ತಾಲ್ಲೂಕಿನ ಇಸಳೂರು, ಎಕ್ಕಂಬಿ, ಬೀಳೂರು, ಬಂಕನಾಳ, ಮುಂಡಗೋಡ ತಾಲ್ಲೂಕಿನ ಕಾಳೇಬೈಲ್, ತೊಗರಳ್ಳಿ, ಬೆಡಸಗಾಂವ್ ಭಾಗದ ಮಳೆಯ ನೀರು ಈ ಜಲಾಶಯಕ್ಕೆ ಹರಿಯುತ್ತದೆ.

ಹೋಗುವುದು ಹೇಗೆ?:

ಹುಬ್ಬಳ್ಳಿ– ತಡಸ– ಮುಂಡಗೋಡ– ಮಳಗಿ (ಇಲ್ಲಿಂದ ಎಡಕ್ಕೆ 2.5 ಕಿ.ಮೀ ಪ್ರಯಾಣಿಸಿದರೆ ಧರ್ಮಾ ಜಲಾಶಯ ಸಿಗುತ್ತದೆ.) ಶಿರಸಿ– ಬಿಸಲಕೊಪ್ಪ– ಮಳಗಿ (ಇಲ್ಲಿಂದ ಎಡಕ್ಕೆ ಸಂಚರಿಸಬೇಕು.)

ಅಂಕಿ-ಅಂಶ

1964

ಜಲಾಶಯ ನಿರ್ಮಾಣ ವರ್ಷ

1.1 ಕಿ.ಮೀ

ಜಲಾಶಯದ ಉದ್ದ

0.77 ಟಿ.ಎಂ.ಸಿ ಅಡಿ

ನೀರಿನ ಸಾಮರ್ಥ್ಯ

29 ಅಡಿ

ನೀರು ಸಂಗ್ರಹವಾದಾಗ ಕೋಡಿ ಬೀಳುತ್ತದೆ

7,692 ಹೆಕ್ಟೇರ್

ನೀರಾವರಿ ಪ್ರದೇಶ

8,900 ಕ್ಯುಸೆಕ್ ನೀರು

ಜಲಾಶಯ ನಿರ್ಮಾಣದ ನಂತರ ಗರಿಷ್ಠ ಹರಿವು: 2019ರಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT