ಗುರುವಾರ , ಮಾರ್ಚ್ 30, 2023
23 °C

ಶಿರಸಿ: ಡಿಜಿಟಲ್ ತರಗತಿ ಕೊಠಡಿ ಉದ್ಘಾಟನೆ 11ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಇಲ್ಲಿನ ನರೇಬೈಲ್‍ನ ಚಂದನ ಶಾಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ರೂಪಿಸಲಾದ ಡಿಜಿಟಲ್ ತರಗತಿ ಕೊಠಡಿ ನ.11ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಶಿರಸಿ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಪ್ರಭು ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಗ್ರಾಮೀಣ ಭಾಗದ ಶಾಲೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಕ್ಲಬ್ ಚಂದನ ಶಾಲೆಯನ್ನು ಆಯ್ಕೆ ಮಾಡಿ ಅಲ್ಲಿ ಸ್ಮಾರ್ಟ್ ಟಿವಿ, ಇಂಟರನೆಟ್ ಸೌಲಭ್ಯವೂ ಸೇರಿದಂತೆ ಹಲವು ಬಗೆಯ ಸೌಕರ್ಯ ಒದಗಿಸಿದೆ. ಒಟ್ಟು ₹7 ಲಕ್ಷ ವೆಚ್ಚ ತಗುಲಿದ್ದು ಇದರಲ್ಲಿ ₹5 ಲಕ್ಷವನ್ನು ಕ್ಲಬ್ ವತಿಯಿಂದ ಭರಿಸಲಾಗಿದೆ’ ಎಂದು ವಿವರಿಸಿದರು.

ಚಂದನ ಶಾಲೆಯ ವಿದ್ಯಾ ನಾಯ್ಕ, ಇನ್ನರ್ ವ್ಹೀಲ್ ಕ್ಲಬ್‍ನ ಮಮತಾ ಹೆಗಡೆ, ರೇಖಾ ಆನಂದ, ಫ್ಲೇವಿಯಾ ಫ್ರಾನ್ಸಿಸ್, ದೀಪ್ತಿ ಉದಾಸಿ, ಮಾಧುರಿ ಶಿವರಾಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.