ಶನಿವಾರ, ಫೆಬ್ರವರಿ 29, 2020
19 °C

ಕದಂಬೋತ್ಸವಕ್ಕೆ ದೇಗುಲದ ಹಣ ಸಂಗ್ರಹ: ಆದೇಶ ವಾಪ‍ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಈ ಬಾರಿಯ ‘ಕದಂಬೋತ್ಸವ’ಕ್ಕೆ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ದೇಗುಲಗಳಿಂದ ದೇಣಿಗೆ ಸಂಗ್ರಹಿಸುವಂತೆ ಹೊರಡಿಸಿದ್ದ ಆದೇಶವನ್ನು ಜಿಲ್ಲಾಡಳಿತವು ಮಂಗಳವಾರ ವಾಪಸ್ ಪಡೆದಿದೆ. 

ಜಿಲ್ಲೆಯ ‘ಎ’ ಮತ್ತು ‘ಬಿ’ ಪ್ರವರ್ಗಗಳ ದೇವಸ್ಥಾನಗಳಿಂದ ಉತ್ಸವಕ್ಕೆ ತಲಾ ₹1 ಲಕ್ಷ ಮತ್ತು ‘ಸಿ’ ಪ್ರವರ್ಗದ ದೇವಸ್ಥಾನಗಳಿಂದ ತಲಾ ₹10 ಸಾವಿರ ದೇಣಿಗೆ ಸಂಗ್ರಹಿಸುವಂತೆ ಎಲ್ಲ ತಹಶೀಲ್ದಾರ್‌ಗಳಿಗೆ ಪತ್ರ ಬರೆಯಲಾಗಿತ್ತು. ಜಿಲ್ಲಾಡಳಿತ ಈ ನಡೆಗೆ ವ್ಯಾಪಕ ಟೀಕೆ ಹಾಗೂ ವಿರೋಧ ವ್ಯಕ್ತವಾಗಿತ್ತು. ದೇವಸ್ಥಾನಗಳ ಆದಾಯವನ್ನು ಅವುಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂದೂ ಹಲವರು ಆಗ್ರಹಿಸಿದ್ದರು. 

ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ತನ್ನ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆದು ತಹಶೀಲ್ದಾರರಿಗೆ ಪತ್ರ ರವಾನಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು