ಶುಕ್ರವಾರ, ಜೂನ್ 5, 2020
27 °C

ಶಿರಸಿ | ನಾಗರ ಕಚ್ಚಿದ್ದ ನಾಯಿಗೆ ಪುನರ್ಜನ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ನಾಗರ ಹಾವಿನೊಂದಿಗೆ ಸೆಣೆಸಾಡಿ, ಸಾವಿನ ಮನೆ ಹೊಕ್ಕಿದ್ದ ಡಾಬರ್‌ಮನ್‌ ನಾಯಿಯೊಂದು ಪಶುವೈದ್ಯರ ಆರೈಕೆಯಲ್ಲಿ ಮರುಜನ್ಮ ಪಡೆದಿದೆ.

ಹಾನಗಲ್‌ನ ಗದುಗೆಪ್ಪ ಪಾಟೀಲ್ ಅವರ ಮನೆಯ ಅಂಗಳಕ್ಕೆ ಎರಡು ದಿನಗಳ ಹಿಂದೆ ಬಂದಿದ್ದ ನಾಗರ ಹಾವನ್ನು ಕಂಡ ಎಂಟು ವರ್ಷದ ಡಾಬರ್‌ಮನ್ ನಾಯಿ ಹಾವಿನ ಮೇಲೆರಗಿತ್ತು. ನಾಯಿ ಮತ್ತು ಹಾವಿನ ಸೆಣೆಸಾಟದಲ್ಲಿ ಹಾವು ನಾಯಿಯನ್ನು ಕಚ್ಚಿತ್ತು, ನಂತರ ನಾಯಿ ಹಾವನ್ನು ತುಂಡರಿಸಿತ್ತು. ‘ವಿಷದ ಹಾವು ಕಚ್ಚಿದ ಕಾರಣ ನಾಯಿಯ ದೇಹದಲ್ಲಿ ನಂಜು ಏರಿತ್ತು. ಹಾವು ಕಚ್ಚಿ 12 ಗಂಟೆಯ ನಂತರ ಮಾಲೀಕರು ಅದನ್ನು ಆಸ್ಪತ್ರೆಗೆ ತಂದಿದ್ದರು. ಕೋಮಾಕ್ಕೆ ಹೋಗಿದ್ದ ನಾಯಿಗೆ ಚಿಕಿತ್ಸೆ ನೀಡಲಾಯಿತು. ಸತತ ಎಂಟು ತಾಸು ಪ್ರಯತ್ನದ ನಂತರ ನಾಯಿ ಎಚ್ಚರಗೊಂಡಿದೆ. ಶುಕ್ರವಾರ ಬೆಳಿಗ್ಗೆ ನಾಯಿ ಸಂಪೂರ್ಣ ಗುಣಮುಖವಾಗಿದೆ. ಹಾವು ಕಚ್ಚಿದ ಜಾಗದಲ್ಲಿ ಬಾವು ಮಾತ್ರ ಇದೆ’ ಎಂದು ಚಿಕಿತ್ಸೆ ನೀಡಿದ ಪಶುವೈದ್ಯ ಡಾ.ಪಿ.ಎಸ್.ಹೆಗಡೆ ತಿಳಿಸಿದರು.

‘ಇದೇ ನಾಯಿ ಈ ಹಿಂದೆ ಏಳು ನಾಗರ ಹಾವುಗಳನ್ನು ಹಿಡಿದು ಸಾಯಿಸಿದೆ. ಈ ನಾಯಿಗೆ ಹಾವನ್ನು ಕಂಡರೆ ಆಗದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು