ಮಂಗಳವಾರ, ಏಪ್ರಿಲ್ 7, 2020
19 °C

ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಮಂಜುಗುಣಿಯಲ್ಲಿ ಪ್ರವೇಶ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ತಾಲ್ಲೂಕಿನ ಮಂಜುಗುಣಿ ವೆಂಕಟರಮಣ ದೇವಸ್ಥಾನದಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಏ.2ರಿಂದ 9ರವರೆಗೆ ನಡೆಯಲಿದ್ದ ದೇವರ ರಥೋತ್ಸವ ಕಾರ್ಯಕ್ರಮಗಳನ್ನು ಸಹ ಸರ್ಕಾರದ ಆದೇಶದ ಮೇರೆಗೆ ಮುಂದೂಡಲಾಗಿದೆ.

ಮುಂದಿನ ಆದೇಶದವರೆಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪುನಸ್ಕಾರ ಹಾಗೂ ಸೇವೆಗಳಿಗೆ ಅವಕಾಶವಿಲ್ಲ. ನಿತ್ಯ ಮಧ್ಯಾಹ್ನದ ಪ್ರಸಾದ ಭೋಜನ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಏ.8ರ ಬ್ರಹ್ಮರಥೋತ್ಸವ ವೇಳೆಗೆ ಹರಕೆ ರೂಪದಲ್ಲಿ ಭಕ್ತರು ಸಲ್ಲಿಸುತ್ತಿದ್ದ ಸೇವೆಗಳಾದ ಮಹಾರಥಕ್ಕೆ ಸಲ್ಲಿಸುವ ಕಾಯಿ, ಕಬ್ಬು, ಅಡಿಕೆ ಕೊನೆಗಳು, ತರಕಾರಿ ಹಾಗೂ ನಾರಾಯಣ ಭೂತರಾಜನಿಗೆ ನೀಡುತ್ತಿದ್ದ ಕಾಯಿ, ರಥಾರೂಢ ವೆಂಕಟರಮಣ ದೇವರ ಪಾದದಡಿಯಲ್ಲಿ ಶಿಶುಗಳನ್ನು ಮಲಗಿಸುವ, ದೇವಸ್ಥಾನಕ್ಕೆ ಸಮರ್ಪಿಸುವ ರಥಗಾಣಿಕೆ ಹಾಗೂ ಇನ್ನಿತರ ಸೇವೆಗಳಿಗೆ ಕೆಲ ದಿನಗಳ ನಂತರ ಅವಕಾಶ ಮಾಡಿಕೊಡಲಾಗುತ್ತದೆ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು