ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಕೈ ಸುಡುತ್ತಿರುವ ‘ಡಿ.ಎ.ಪಿ’

ಕೆಲವು ದಿನಗಳಿಂದ ಸುರಿದ ಉತ್ತಮ ಮಳೆ: ಹೊಲ ಹಸನು ಮಾಡಲು ಅನ್ನದಾತನ ಸಿದ್ಧತೆ
Last Updated 19 ಮೇ 2021, 15:22 IST
ಅಕ್ಷರ ಗಾತ್ರ

ಮುಂಡಗೋಡ: ಕೆಲವು ದಿನಗಳಿಂದ ಸುರಿದ ಮಳೆಯು ಬಿತ್ತನೆಗೆ ಹದ ಮಾಡಿಕೊಟ್ಟಿದೆ. ವರ್ಷದ ದುಡಿಮೆ ಆರಂಭಕ್ಕೆ, ಅನ್ನದಾತ ಈಗಾಗಲೇ ಚಾಲನೆ ನೀಡಿದ್ದಾರೆ. ಹೊಲಗದ್ದೆಗಳನ್ನು ಹಸನು ಮಾಡಿ, ಕಾಳಿನ ಕಣಜ ತುಂಬಿಸಲು ಅಣಿಯಾಗಿದ್ದಾರೆ. ಆದರೆ, ರಸಗೊಬ್ಬರ ದರ ಏರಿಕೆಯಾಗಿದ್ದು, ರೈತರಿಗೆ ಹೊರೆಯಾಗಿದೆ.

‘ಡಿ.ಎ.ಪಿ. ಗೊಬ್ಬರವು ಈ ಸಲಕೈ ಸುಡುತ್ತಿದೆ. ಕಳೆದ ವರ್ಷ ಪ್ರತಿ ಚೀಲಕ್ಕೆ ₹1,200 ರೂಪಾಯಿ ಇದ್ದ ದರವು, ಈ ಸಲ ₹1,900ಕ್ಕೆ ಏರಿಕೆಯಾಗಿದೆ. 1026 ಮಾದರಿಯ ಗೊಬ್ಬರವೂ ಪ್ರತಿ ಚೀಲದ ಮೇಲೆ ₹625ಯಷ್ಟು ಹೆಚ್ಚಳವಾಗಿದೆ. ವರ್ಷದಿಂದ ವರ್ಷಕ್ಕೆ ಬೀಜ, ಗೊಬ್ಬರ ಬೆಲೆ ಏರುತ್ತಿದೆ. ಆದರೆ ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ’ ಎಂದು ರೈತ ಬಾಬಣ್ಣ ವಾಲ್ಮೀಕಿ ಹೇಳಿದರು.

ತಾಲ್ಲೂಕಿನಲ್ಲಿ 13,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೆಲಸ ನಡೆಯುತ್ತದೆ. ಇದಲ್ಲದೇ 6 ಸಾವಿರದಿಂದ 8 ಸಾವಿರ ಹೆಕ್ಟೇರ್ ಅರಣ್ಯ ಅತಿಕ್ರಮಣ ಭೂಮಿಯಲ್ಲಿಯೂ ರೈತರು ಕೃಷಿ ಕೆಲಸ ಮಾಡುತ್ತಾರೆ. ಮಳೆ ತುಸು ಬಿಡುವು ನೀಡಿದರೆ, ಬಿತ್ತನೆ ಕಾರ್ಯ ಭರದಿಂದ ಸಾಗಲಿದೆ ಎಂದು ರೈತರು ಹೇಳುತ್ತಾರೆ.

ಬೀಜ, ಗೊಬ್ಬರ ಖರೀದಿ: ಇಲ್ಲಿನ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಭತ್ತ ಹಾಗೂ ಗೋವಿನಜೋಳದ ವಿವಿಧ ತಳಿಗಳ ಮಾಹಿತಿ, ದರವನ್ನು ರೈತರು ಪಡೆಯುತ್ತಿದ್ದಾರೆ. ವಾರದ ಮುಂಚೆ ಗದ್ದೆ ಹಸನು ಮಾಡಿಕೊಂಡಿರುವ ರೈತರಿಗೆ, ಬಿತ್ತನೆಗೆ ತುರ್ತಾಗಿ ಬೀಜ ಬೇಕಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT