ಬುಧವಾರ, ಫೆಬ್ರವರಿ 19, 2020
30 °C

ಇನ್ಸುಲೇಟರ್‌ಗೆ ಬೆಂಕಿ: ತಪ್ಪಿದ ಅಪಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಂಡೇಲಿ: ಕರ್ನಾಟಕ ವಿದ್ಯುತ್ ನಿಗಮದ ಅಂಬಿಕಾನಗರದ ಪವರ್ ಹೌಸ್ ಬಳಿಯ ವಿದ್ಯುತ್ ಗ್ರಿಡ್‍ನ ಇನ್ಸುಲೇಟರ್‌ನಲ್ಲಿ ಸೋಮವಾರ ಭಾರಿ ಸ್ಫೋಟದೊಂದಿಗೆ ಅಗ್ನಿ ಅವಘಡ ಸಂಭವಿಸಿತು. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿತು.

ನಿಗಮದ ಪವರ್ ಹೌಸ್‍ಗೆ ಸಮೀಪದಲ್ಲಿರುವ ವಿದ್ಯುತ್ ಗ್ರಿಡ್‌ನಲ್ಲಿ ಈ ಅವಘಡವಾಗಿದ್ದು, ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ಸುಲೇಟರ್‌ನಲ್ಲಿ ಇದ್ದಕ್ಕಿದ್ದಂತೆ ಸ್ಫೋಟಗೊಂಡ ರೀತಿಯಲ್ಲಿ ಶಬ್ದವಾಗಿ ಬೆಂಕಿ ಹೊತ್ತಿಕೊಂಡಿತು. ಇದರಿಂದ ಹತ್ತಿರದಲ್ಲಿದ್ದ ನಿಗಮದ ಸಿಬ್ಬಂದಿ ಭಯಭೀತರಾದರು. ಸ್ವಲ್ಪ ಹೊತ್ತಿನ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಘಟನೆಯಿಂದ ವಿದ್ಯುತ್ ನಿಗಮಕ್ಕೆ ಲಕ್ಷಾಂತರ ರೂಪಾಯಿ ಹಾನಿಯಾಗಿರಬಹುದೆಂದು ಅಂದಾಜಿಸಲಾಗಿದೆ. ಆದರೆ, ಈ ಬಗ್ಗೆ ಮಾಹಿತಿ ಪಡೆಯಲು ನಿಗಮದ ಅಧಿಕಾರಿಗಳು ಲಭ್ಯರಾಗಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು