ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರತ್ನಗಿರಿಯಲ್ಲಿ ಉತ್ತರ ಕನ್ನಡದ ಮೀನುಗಾರರ ಪರದಾಟ

Last Updated 28 ಮಾರ್ಚ್ 2020, 16:31 IST
ಅಕ್ಷರ ಗಾತ್ರ

ಕಾರವಾರ:ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಗೆ ಕೆಲಸಕ್ಕೆಂದು ಹೋದಉತ್ತರ ಕನ್ನಡದ ಸುಮಾರು 150 ಮೀನುಗಾರರು ತವರೂರಿಗೆ ಬರಲಾಗದೇ ಸಂಕಷ್ಟಕ್ಕೀಡಾಗಿದ್ದಾರೆ. ಕೆಲಸಕ್ಕೆ ನಿಯೋಜಿಸಿಕೊಂಡಿದ್ದ ಪರ್ಸೀನ್ ದೋಣಿಗಳ ಮಾಲೀಕರೂ ಸ್ಪಂದಿಸುತ್ತಿಲ್ಲ. ಊಟವೂ ಸಿಗದ ಪರಿಸ್ಥಿತಿಯಿದೆ ಎಂದು ಕಣ್ಣೀರಿಡುತ್ತಿದ್ದಾರೆ.

ತಮ್ಮ ಸಂಕಷ್ಟವನ್ನು ವಿಡಿಯೊ ಮಾಡಿ ವಾಟ್ಸ್‌ಆ‌್ಯಪ್ ಮೂಲಕ ತಮ್ಮ ಪರಿಚಿತರಿಗೆ ಕಳುಹಿಸಿಕೊಟ್ಟಿದ್ದಾರೆ.ಅಂಕೋಲಾ, ಕಾರವಾರ, ಬೇಲೆಕೇರಿ, ಕುಮಟಾ, ಭಟ್ಕಳ ಮುಂತಾದ ಭಾಗಗಳ ಮೀನುಗಾರರು ಅಲ್ಲಿದ್ದಾರೆ.

‘ಮೂರು ನಾಲ್ಕುತಿಂಗಳ ಹಿಂದೆ ಕೆಲಸಕ್ಕೆಂದು ಬಂದಿದ್ದೇವೆ. ಪರ್ಸೀನ್ ದೋಣಿಗಳಲ್ಲಿ ನಾವುಕೆಲಸ ಮಾಡುತ್ತಿದ್ದೆವು. ಈಗ ಹೊರಗೆ ಹೋದರೆ ಪೊಲೀಸರು ಬಂಧಿಸುತ್ತಾರೆ ಎಂದು ದೋಣಿಗಳ ಮಾಲೀಕರುವಾಪಸ್ ಬರಲು ಬಿಡುತ್ತಿಲ್ಲ.ಕೊರೊನಾ‌ ವೈರಸ್ ಭೀತಿಯಿಂದ ಪೊಲೀಸರುಎಲ್ಲರನ್ನು ಒಟ್ಟಿಗೆ ಇರಲೂ ಬಿಡುತ್ತಿಲ್ಲ.ಮಲಗಲುಸ್ಥಳವಿಲ್ಲ. ಸ್ಥಳೀಯರು ಏನಾದರೂ ಕೊಟ್ಟರೆಅದುವೇ ಹೊಟ್ಟೆಗೆ ಗತಿಯಾಗಿದೆ’ ಎಂದು ಅಳಲು ತೋಡಿಕೊಂಡಿದ್ದಾರೆ.

‘ದೋಣಿ ಮಾಲೀಕರು ವೇತನವನ್ನೂ ನೀಡಿಲ್ಲ. ಹಾಗಾಗಿ ಇಲ್ಲಿರುವ ಎಲ್ಲರನ್ನೂ ಕರ್ನಾಟಕದ ಅಧಿಕಾರಿಗಳು ರಕ್ಷಿಸಬೇಕು. ನಮ್ಮನ್ನು ತ್ರಿಶಂಕು ಸ್ಥಿತಿಯಿಂದ ಪಾರು ಮಾಡಬೇಕು’ ಎಂದು ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲಿ ಅಂಗಲಾಚಿದ್ದಾರೆ.

ಅಲ್ಲಿನ ಸ್ಥಳೀಯ ಆಡಳಿತ ತಾತ್ಕಾಲಿಕ ಪುನರ್ವಸತಿಗೆ ಅಥವಾ ಕಳುಹಿಸಿಕೊಡಲು ವ್ಯವಸ್ಥೆ ಮಾಡಬೇಕು. ಮೀನುಗಾರರ ಸಹಾಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದುಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ನಾಗರಾಜು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT