ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ | ನಾಲ್ಕು ತಾಲ್ಲೂಕುಗಳಲ್ಲಿ 4 ಕೋವಿಡ್‌ ಪ್ರಕರಣ

ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ: ಎಲ್ಲರಿಗೂ ಕ್ವಾರಂಟೈನ್
Last Updated 19 ಮೇ 2020, 12:27 IST
ಅಕ್ಷರ ಗಾತ್ರ

ಕಾರವಾರ:ಹೊರರಾಜ್ಯಗಳಿಂದ ಜಿಲ್ಲೆಗೆ ಬಂದಿರುವವರ ಪೈಕಿ ಮತ್ತೆ ನಾಲ್ವರಲ್ಲಿ ಕೋವಿಡ್-19 ಮಂಗಳವಾರ ದೃಢಪಟ್ಟಿದೆ. ಅವರು ಹೊನ್ನಾವರ, ದಾಂಡೇಲಿ, ಯಲ್ಲಾಪುರ ಮತ್ತು ಜೊಯಿಡಾದನಿವಾಸಿಗಳಾಗಿದ್ದು, ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘31 ವರ್ಷದ ಜೊಯಿಡಾದ ಮಹಿಳೆಯು (ರೋಗಿ ಸಂಖ್ಯೆ 1362) ತಮಿಳುನಾಡಿನ ಮಧುರೈನಿಂದ ವಾಪಸಾಗಿದ್ದರು. ಅವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಸೇರಿಸಲಾಗಿದ್ದು,14 ದಿನಗಳ ಬಳಿಕ ಕೋವಿಡ್ ಪಾಸಿಟಿವ್ ಬಂದಿದೆ. ಅವರ ಜೊತೆಗಿದ್ದ ಯಾರಿಗೂ ಸೋಂಕು ದೃಢಪಟ್ಟಿಲ್ಲ’ ಎಂದರು.

‘ದಾಂಡೇಲಿಯ ಸೋಂಕಿತ ವ್ಯಕ್ತಿಯು 24 ವರ್ಷದಯುವಕ (ರೋಗಿ ಸಂಖ್ಯೆ 1313) ಟ್ರಕ್ ಚಾಲಕನಾಗಿದ್ದು, ಮೇ 14ರಂದು ಗುಜರಾತ್‌ನಿಂದಮಂಗಳೂರಿಗೆ ಹೋಗಿದ್ದರು.ಬಳಿಕಗೋವಾಕ್ಕೆ ತೆರಳಿ, ನಂತರ ಹಳಿಯಾಳಕ್ಕೆ ಹೋಗಿದ್ದರು. ಅಲ್ಲಿಂದ ಬೈಕ್‌ನಲ್ಲಿ ಮನೆಗೆ ಬಂದು ರಾತ್ರಿ ಉಳಿದುಕೊಂಡಿದ್ದರು. ಅವರು ಹೊರರಾಜ್ಯದಿಂದ ಬಂದವರಾದ ಕಾರಣ ಗಂಟಲುದ್ರವವನ್ನು ತಕ್ಷಣ ಪರೀಕ್ಷಿಸಲಾಗಿತ್ತು’ ಎಂದು ಮಾಹಿತಿ ನೀಡಿದರು.

‘ಯಲ್ಲಾಪುರದಲ್ಲಿ ಸೋಂಕಿತ ಮಹಿಳೆಯು 34 ವರ್ಷದವರಾಗಿದ್ದು (ರೋಗಿ ಸಂಖ್ಯೆ 1362), ಅವರು ಮುಂಬೈನಿಂದ ವಾಪಸಾಗಿದ್ದರು. ಹೊನ್ನಾವರದ ಕ್ವಾರಂಟೈನ್ ಕೇಂದ್ರದಲ್ಲಿದ್ದ 16 ವರ್ಷದ ಬಾಲಕಿಗೆ (ರೋಗಿ ಸಂಖ್ಯೆ 1314) ಕೋವಿಡ್ ದೃಢಪಟ್ಟಿದೆ. ಆಕೆ ಮಹಾರಾಷ್ಟ್ರದ ಸೊಲ್ಲಾಪುರದಿಂದ ಮರಳಿದ್ದಳು. ಇಬ್ಬರೂಚೆಕ್‌ಪೋಸ್ಟ್‌ನಿಂದ ನೇರವಾಗಿ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಕ್ಕೇ ಬಂದಿದ್ದರು’ ಎಂದು ತಿಳಿಸಿದರು.

‘ದಾಂಡೇಲಿ ಮತ್ತುಜೊಯಿಡಾದಪ್ರಕರಣಗಳಲ್ಲಿ ಸೋಂಕಿತರಿದ್ದ ಮನೆಗಳ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ. ನಾಲ್ಕೂ ಜನರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳನ್ನು‍ಪತ್ತೆ ಹಚ್ಚಲಾಗುತ್ತಿದೆ’ ಎಂದರು.

ಖಾಸಗಿ ಲ್ಯಾಬ್ತಪ್ಪು ವರದಿ!: ‘ಗೋವಾದಲ್ಲಿ ಕೋವಿಡ್ 19 ಪಾಸಿಟಿವ್ ಬಂದಿರುವ ಅಣಶಿಯ ಯುವಕ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅವರ ಜೊತೆಗೆ ಕೊಠಡಿಯಲ್ಲಿಇರುವವರ ಗಂಟಲುದ್ರವವನ್ನು ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾ ಪಾಸಿಟಿವ್ ಬಂದಿತ್ತು. ಬಳಿಕ ಸರ್ಕಾರಿ ಪ್ರಯೋಗಾಲಯದಲ್ಲೂ ಪರೀಕ್ಷಿಸಿದಾಗ ಸೋಂಕು ಇಲ್ಲ ಎಂದು ತಿಳಿದುಬಂದಿದೆ. ಅಂದರೆ, ಖಾಸಗಿ ಪ್ರಯೋಗಾಲಯದಲ್ಲಿ ಬಂದಿರುವ ವರದಿ ತಪ್ಪಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಅಣಶಿಯ ಯುವಕನ ಗಂಟಲುದ್ರವದ ಮಾದರಿಯನ್ನೂ ಪರೀಕ್ಷೆಗೆ ಕಳುಹಿಸಲಾಗಿದ್ದು, ನೆಗೆಟಿವ್ ಬರುವ ನಿರೀಕ್ಷೆಯಲ್ಲಿ ಆ ಯುವಕ ಇದ್ದಾರೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ವಿದೇಶದಿಂದ ಬಂದವರಿಗೆ ಕ್ವಾರಂಟೈನ್:ವಿದೇಶದಿಂದ ಬಂದವರು ಇಚ್ಛಿಸಿದರೆ ಹೋಟೆಲ್ ಕ್ವಾರಂಟೈನ್‌ ಮಾಡಲಾಗುತ್ತದೆ. ಅವರಿಗೆ ಹಣದ ಸಮಸ್ಯೆಯಿದ್ದರೆ ಸಾಂಸ್ಥಿಕ ಕ್ವಾರಂಟೈನ್ ಇದೆ. ಅವರು ಬಂದ ದಿನ ಮತ್ತು 12ನೇ ದಿನಕ್ಕೆ ಗಂಟಲುದ್ರವದ ಮಾದರಿ ಪರೀಕ್ಷೆ ಮಾಡಲಾಗುತ್ತದೆ. ಕೋವಿಡ್ 19 ನೆಗೆಟಿವ್ ಬಂದರೆ ಮನೆಗೆ ಕಳುಹಿಸಿ,ಅಲ್ಲಿ ಪುನಃ 14 ದಿನ ಕ್ವಾರಂಟೈನ್ ಮಾಡಲಾಗುತ್ತದೆ. ಕಾರವಾರದ ಬಂದರಿನ ಮೂಲಕವೂ ವಿದೇಶಗಳಿಂದ ಜನರು ಬರಬಹುದು. ಅವರಿಗೂ ಇದೇ ನಿಯಮ ಅನ್ವಯವಾಗುತ್ತದೆ’ ಎಂದರು.

ಕ್ರಿಮಿನಲ್ ಮೊಕದ್ದಮೆ:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ‘ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ಜನರ ಪಾತ್ರವೇ ಮಹತ್ವದ್ದಾಗಿದೆ. ಕಡಲ ತೀರಕ್ಕೆ ವಾಯುವಿಹಾರಕ್ಕೆ ಬರುವುದು, ಅಲ್ಲಲ್ಲಿ ಆಟವಾಡುವುದು, ಜನ್ಮದಿನಾಚರಣೆಯ ಪಾರ್ಟಿ ಆಯೋಜಿಸುವುದು ಸರಿಯಲ್ಲ. ಇನ್ನೊಂದೆರಡು ದಿನ ಗಮನಿಸಿ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಒಂದುವೇಳೆ ಹೊರರಾಜ್ಯಗಳಿಂದ ಬಂದು ತಪ್ಪು ಮಾಹಿತಿ ನೀಡದಿದ್ದರೆ ಅಥವಾ ಮಾಹಿತಿ ಮುಚ್ಚಿಟ್ಟರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಈಗಾಗಲೇ ಎರಡು ಪ್ರಕರಣಗಳಲ್ಲಿ ಪ್ರಾಥಮಿಕ ತನಿಖಾ ವರದಿ ಕೂಡ ಸಿದ್ಧವಾಗಿದೆ. ನಿಯಮ ಉಲ್ಲಂಘನೆ ಸಂಬಂಧ 120ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಹೇಳಿದರು.

‘ಹೊರರಾಜ್ಯಗಳಿಂದ ಜಿಲ್ಲೆಗೆ ಬರಲು ಅನುಮತಿ ಪಡೆದುಕೊಂಡವರಲ್ಲಿ ಎಲ್ಲರೂ ಬರಲಿಲ್ಲ. ಮಹಾರಾಷ್ಟ್ರದಿಂದ ಬರಲು 4,028 ಜನ ಅರ್ಜಿ ಸಲ್ಲಿಸಿದ್ದರು. 3,926 ಜನರಿಗೆ ಅನುಮತಿ ನೀಡಲಾಗಿತ್ತು. ಅವರಲ್ಲಿ1,313 ಜನ ಮಾತ್ರ ಬಂದಿದ್ದಾರೆ. ವಾಹನದ ವ್ಯವಸ್ಥೆ ಇಲ್ಲದ್ದು ಹಾಗೂ ಕ್ವಾರಂಟೈನ್ ಮಾಡುವ ಕಾರಣಕ್ಕೆಹಲವರು ಬರಲಿಲ್ಲ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಇದ್ದರು.

***
ಸೋಂಕಿತರ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವವರ ವಿರುದ್ಧ ಈಗಾಗಲೇ ದೂರು ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
- ಡಾ.ಕೆ.ಹರೀಶಕುಮಾರ್,ಜಿಲ್ಲಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT