ಯಲ್ಲಾಪುರ: ತಾಲ್ಲೂಕಿನ ಇಡಗುಂದಿ ಗ್ರಾಮದ ಸಂಪೇಬೈಲ್ನಲ್ಲಿ ಸೋಮವಾರಗುಡ್ಡದ ಮಣ್ಣು ಕುಸಿದು ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.

ತಾಲ್ಲೂಕಿನ ಕಿರವತ್ತಿ ಬಳಿಯ ಹೊಸಳ್ಳಿ ಗ್ರಾಮದ ಭಾಗ್ಯಶ್ರೀ ಯಡಗೆ (21), ಲಕ್ಷ್ಮೀ ದೋಯಿಪಡೆ (38), ಸಂತೋಷ ದೋಯಿಪಡೆ (18) ಹಾಗೂ ಮಾಳು ದೋಯಿಪಡೆ (21) ಮೃತರು.

ಸಂಜೆಯ ವೇಳೆಗೆ ಗುಡ್ಡದ ಮೇಲಿನ ಮಣ್ಣನ್ನು ಅರ್ಧ ತೆರವು ಮಾಡಿದ್ದ ಕಾರ್ಮಿಕರು, ನೀರು ಕುಡಿಯಲೆಂದು ಕೆಳಗೆ ಬಂದು ಕುಳಿತಿದ್ದರು. ಆಗ ಭಾರಿ ಪ್ರಮಾಣದಲ್ಲಿ ಮಣ್ಣು ಏಕಾಏಕಿ ಕುಸಿದು ಕಾರ್ಮಿಕರು ಅದರ ಕೆಳಗೆ ಸಿಲುಕಿದರು.

ಮಂಜುನಾಥ ನಾಗಪ್ಪ ಭಟ್ ಎಂಬುವವರ ತೋಟದಲ್ಲಿ ಈ ಅವಘಡ ನಡೆದಿದೆ. ಅಲ್ಲಿ ಒಟ್ಟು ಏಳು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.