ಶನಿವಾರ, ಏಪ್ರಿಲ್ 4, 2020
19 °C

ಗಾಂಜಾ ಮಾರಾಟ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ನಗರದಲ್ಲಿ ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನಗರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿ, ಬಂಧಿತನಿಂದ ಎರಡು ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಶಿಗ್ಗಾಂವದ ಭಾಷಾ ಸಾಬ್ ಬಂಧಿತ ಆರೋಪಿ. ಡಿಎಸ್ಪಿ ಜಿ.ಟಿ.ನಾಯಕ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಸಿಪಿಐ ಪ್ರದೀಪ ಹಾಗೂ ನಗರ ಠಾಣೆಯ ಪಿಎಸ್ಐ ಶಿವಾನಂದ ಅವರು, ನಗರದ ಸಿದ್ದಾಪುರ ರಸ್ತೆ ಬಳಿ ಆರೋಪಿಯನ್ನು ಬಂಧಿಸಿದ್ದಾರೆ. ‘ಆರೋಪಿ ಬಳಿ ಗಾಂಜಾ ಖರೀದಿಸಲು, ಬಂದಿದ್ದ ಸುಮಾರು 15 ಯುವಕರು ತಪ್ಪಿಸಿಕೊಂಡಿದ್ದಾರೆ. ಅವರ ಹುಡುಕಾಟ ನಡೆಸಲಾಗಿದೆ. ಆರೋಪಿ ಭಾಷಾ ಸಾಬ್ ಗಾಂಜಾವನ್ನು ಬೆಳಗಾವಿಯಿಂದ ತಂದು, ಮಾರಾಟ ಮಾಡುತ್ತಿದ್ದ. ದಲ್ಲಾಳಿಯನ್ನು ಹಿಡಿಯಲು ಕೂಡ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)