ಜೀವ ವೈವಿಧ್ಯ ಜಾಗೃತಿ ತರಬೇತಿ ಪಡೆದ ಗೋವಾ ತಂಡ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಜೀವವೈವಿಧ್ಯ ಸಂರಕ್ಷಣೆ, ಜಾಗೃತಿಗೆ ಕೈಗೊಂಡಿರುವ ಕಾರ್ಯಗಳನ್ನು ಅವಲೋಕಿಸಿ ತರಬೇತಿ ಪಡೆಯಲು ಗೋವಾದ 35 ಗ್ರಾಮ ಪಂಚಾಯ್ತಿಗಳ ಪ್ರತಿನಿಧಿಗಳ ತಂಡ ನಗರಕ್ಕೆ ಭೇಟಿ ನೀಡಿದೆ.
ಮೂರು ದಿನಗಳ ಅಧ್ಯಯನ ಪ್ರವಾಸಕ್ಕೆ ಗೋವಾದ ತಂಡ ಆಗಮಿಸಿದ್ದು ಭಾನುವಾರ ಇಲ್ಲಿನ ಕದಂಬ ಸೌಹಾರ್ಧ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ತರಬೇತಿ ಶಿಬಿರಕ್ಕೆ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಚಾಲನೆ ನೀಡಿದರು.
‘ಗ್ರಾಮದ ಅಂಚಿನ ಅರಣ್ಯಗಳ ಸಂರಕ್ಷಣೆಗೆ ಹೆಚ್ಚು ಗಮನಹರಿಸುವ ಅಗತ್ಯವಿದೆ. ಕೃಷಿ, ತೋಟಗಾರಿಕೆ, ಜಾನುವಾರು ತಳಿ ವೈವಿಧ್ಯ, ಕೆರೆಗಳ ಸಂರಕ್ಷಣೆಗೆ ಮುತುವರ್ಜಿ ವಹಿಸಬೇಕು’ ಎಂದು ಅವರು ಸಲಹೆ ನೀಡಿದರು.
ಅಧ್ಯಯನ ತಂಡದಲ್ಲಿ ಪಾಲ್ಗೊಂಡಿರುವ ಗೋವಾದ ವಿವಿಧ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಪಿಡಿಓಗಳ ಜತೆ ಸಂವಾದ ನಡೆಸಲಾಯಿತು.
ಕದಂಬ ಸೌಹಾರ್ಧ ಮಾರ್ಕೆಟಿಂಗ್ ಸಂಸ್ಥೆಯ ಅಧಿಕಾರಿ ವಿಶ್ವೇಶ್ವರ ಭಟ್ ಅವರು ರೈತರ ಉತ್ಪನ್ನಗಳ ಮೌಲ್ಯ ವರ್ಧನೆ, ಗ್ರಾಮೀಣ ಮಹಿಳಾ ಶಕ್ತಿ ಸಬಲೀಕರಣ, ಸಹಕಾರ ಆಂದೋಲನದ ಕುರಿತು ಮಾಹಿತಿ ನೀಡಿದರು.
ಗೋವಾ ಜೀವ ವೈವಿಧ್ಯ ಮಂಡಳಿಯ ಸದಸ್ಯ ಕಾರ್ಯದರ್ಶಿ ಡಾ.ಪ್ರದೀಪ, ಅರಣ್ಯ ವಿಜ್ಞಾನಿ ಡಾ.ಜವರೇಗೌಡ ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.